
ಮೂಡಿಗೆರೆ/ಬೆಳ್ತಂಗಡಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು – ದಕ್ಷಿಣ ಕನ್ನಡ ಗಡಿಭಾಗದ ಚಾರ್ಮಾಡಿ ಘಾಟಿಯಲ್ಲಿ ನಿನ್ನೆ ಸರಣಿ ಅಪಘಾತ ನಡೆದಿದೆ.
ಇದನ್ನೂ ಓದಿ: ಹುಟ್ಟೂರು ಶೃಂಗೇರಿಯನ್ನ ಕೊಂಡಾಡಿದ ವಜ್ರಕಾಯ ಬೆಡಗಿ; ನಾನು ಶೃಂಗೇರಿಯವಳು ಎನ್ನಲು ಈ ಕಾರಣಕ್ಕೆ ಹೆಮ್ಮೆ ನಭಾ ನಟೇಶ್..

ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದ ಈ ಅಪಘಾತದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಎರಡು ಲಾರಿಗಳು ಪರಸ್ ರ ಡಿಕ್ಕಿ ಹೊಡೆದುಕೊಂಡಿವೆ. ಮಾಹಿತಿಯ ಪ್ರಕಾರ, ಕೆ.ಎಸ್.ಆರ್.ಟಿ.ಸಿ. ಬಸ್, ಗ್ಯಾಸ್ ಸಿಲಿಂಡರ್ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಹಿಂಬದಿಯಿಂದ ಮತ್ತೊಂದು ಲಾರಿ, ಗ್ಯಾಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ತೀವ್ರಗೊಂಡಿದೆ. ಇದರಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ; ಶುರು-ಅಂತ್ಯ ಯಾವಾಗ?













