
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲಯ ಸ್ಕೂಟಿ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದೆ.
ಇದನ್ನೂ ಓದಿ: ಯಜಮಾನಿಯರಿಗೆ ಸಿಹಿಸುದ್ದಿ; ಫೆಬ್ರವರಿ, ಮಾರ್ಚ್ 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ

ಮೂಡಿಗೆರೆ ಪಟ್ಟಣದಲ್ಲಿ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರ ಸಮ್ಮುಖದಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಅಪ್ರಾಪ್ತ ಬಾಲಕನೋರ್ವ ಕೆಎ 18, ಇಸಿ 2707 ನಂಬರಿನ ಸ್ಕೂಟಿಯನ್ನು ಚಾಲನೆ ಮಾಡುತ್ತಿದ್ದುದು ಪರಿಶೀಲನೆಯಿಂದ ತಿಳಿದುಬಂದಿತ್ತು. ದಾಖಲೆಗಳನ್ನು ಪರಿಶೀಲಿಸಿದಾಗ ಸ್ಕೂಟಿಯು ಬಾಪುನಗರ ವಾಸಿ ಮಹಮ್ಮದ್ ಸಿರಾಜ್ ಎಂಬುವವರು ಸೇರಿದಾಗಿದ್ದು, ಅಪ್ರಾಪ್ತನಿಗೆ ವಾಹನ ಚಾಲನೆ ಮಾಡಲು ನೀಡಿದ ಆರೋಪದಲ್ಲಿ ವಾಹನ ಮಾಲೀಕ ಮಹಮ್ಮದ್ ಸಿರಾಜ್ ವಿರುದ್ಧ ಕೇಸು ದಾಖಲಿಸಲಾಗಿತ್ತು.

ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿರುವವರು ಈ ಸುದ್ದಿ ಓದಿ; ಆಹಾರ ಇಲಾಖೆಯಿಂದ ಮುಖ್ಯ ಮಾಹಿತಿ
ಈ ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲದ ನ್ಯಾಯಾದೀಶರು ವಾಹನ ಮಾಲೀಕ ಮಹಮ್ಮದ್ ಸಿರಾಜ್ ಅವರಿಗೆ 25 ಸಾವಿರ ದಂಡ ವಿಧಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ; 10th ವಿದ್ಯಾರ್ಹತೆ, ಆಕರ್ಷಕ ಸಂಬಳ













