ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರ ಸಮಯಪ್ರಜ್ಞೆ ಮತ್ತು ಶಕ್ತಿಯ ಇನ್ನಷ್ಟು ವರ್ಧನೆಗಾಗಿ ವೈಕುಂಠಪುರ ಅಗ್ರಹಾರದ ದುರ್ಗಾಂಬಾ ದೇವರ ಸನ್ನಿಧಿಯಲ್ಲಿ ಇಂದು ಮನ್ಯುಸೂಕ್ತಹೋಮವನ್ನು ಮಾಡಲಾಯಿತು.
ಇದನ್ನೂ ಓದಿ: ನಿರ್ಮಾಣ ಕಾರ್ಮಿಕರ ಅಪಘಾತಕ್ಕೆ 2 ಲಕ್ಷ, ಕುಟುಂಬಕ್ಕೆ 5 ಲಕ್ಷ ಪರಿಹಾರ; ಪಡೆಯುವುದು ಹೇಗೆ? ಇಲ್ಲಿದೆ ನೋಡಿ

ಮುರಳಿ ಕೃಷ್ಣ ಭಟ್, ನಂದ ಕುಮಾರ್ ಭಟ್, ರಮೇಶ್ ಭಟ್, ಕುಮಾರ ಭಟ್ ಬೇಟಿಗೆರೆ, ರಮೇಶ್, ಶ್ರೀಕರ, ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಅಗ್ರಹಾರದ ದುರ್ಗಾಂಬಾ ದೇವರ ಸನ್ನಿಧಿಯಲ್ಲಿ ದೇವತಾಪ್ರಾರ್ಥನೆ ಹಾಗೂ ಶತ್ರುಸಂಹಾರಕ್ಕಾಗಿ ಮನ್ಯುಸೂಕ್ತಹೋಮವನ್ನು ಮಾಡಲಾಯಿತು.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ಗಳಿಗೆ ಆಧಾರ್ ಬಯೋಮೆಟ್ರಿಕ್; ಪೂರ್ತಿ ಪೇಪರ್ಲೆಸ್ ಪ್ರಕ್ರಿಯೆ
ದೇಶದಲ್ಲಿ ಹಿಂದೂತ್ವ ಗಟ್ಟಿಯಾಗಬೇಕು. ಸೈನಿಕರ ದೈರ್ಯ ಹೆಚ್ಚಾಗಬೇಕು. ದೇಶದ ಹೊರಗಿರುವ ಶತ್ರುಗಳು ನಾಶವಾಗಲು ಜೊತೆಗೆ ದೇಶದ ಒಳಗಿರುವ ಶತ್ರುಗಳಿಗೆ ಒಳ್ಳೆ ಬುದ್ದಿ ಕೊಡುವುದಕ್ಕಾಗಿ ಹಾಗೆಯೇ ದೇಶದ ಪ್ರಧಾನಿ ಮೋದಿಯವರಿಗೆ ಶುಭವಾಗಲಿ ಎಂದು ಹೋಮದ ಪೂರ್ಣಾಹುತಿ ಬಳಿಕ ನಂದಕುಮಾರ್ ಭಟ್ ಹೇಳಿದರು.













