
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ರಾಜ್ಯ ಜಗತ್ತಿನಾದ್ಯಂತ ಹೆಸರು ಮಾಡಲು ಕೆಂಪೇಗೌಡರು ಕಾರಣಿಕರ್ತರಾಗಿದ್ದಾರೆ ಎಂದು ಯುವ ಒಕ್ಕಲಿಗ ವೇದಿಕೆಯ ಗೌರವಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಹೇಳಿದರು.
ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಬ್ಲ ಕೈಮರ ವೃತ್ತದಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆಯ ವತಿಯಿಂದ ಆಚರಿಸಿದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡ ಪ್ರಭು ಕೆಂಪೇಗೌಡರು ಈ ದೇಶಕಂಡ ಅಪ್ರತಿಮ ಹೋರಾಟಗಾರ ಹಾಗೂ ದೂರದ್ರಷ್ಟಿ ಹೊಂದಿದ್ದ ಆಡಳಿತಗಾರರಾಗಿದ್ದು, 1510ರಲ್ಲಿ ಜನಿಸಿದ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆಯೇ ಬೆಂಗಳೂರಿನಂಥ ಬೃಹತ್ ನಗರದ ನಿರ್ಮಾಣ ಮಾಡಿದರು.

ಸುಸಜ್ಜಿತ ರಾಜಕಾಲುವೆ, ನೀರಿನ ವ್ಯವಸ್ಥೆ, ಉದ್ಯಾನವನ ಮಾರುಕಟ್ಟೆಗಳನ್ನು, ದೇವಸ್ಥಾನ ಸೇರಿದಂತೆ ಎಲ್ಲಾ ಅವಶ್ಯಕತೆಗಳನ್ನು ರೂಪಿಸಿದ್ದರು. ಅವರೊಬ್ಬ ಅತ್ಯದ್ಭುತ ಇಂಜಿನಿಯರ್, ಅತ್ಯದ್ಭುತ ಮಾರುಕಟ್ಟೆ ಪರಿಣಿತ, ಅತ್ಯದ್ಭುತ ಸಮಾಜ ಸುಧಾರಕ, ಅತ್ಯದ್ಭುತನೀರಾವರಿ ತಜ್ಞ, ಅತ್ಯದ್ಭುತ ಆಡಳಿತಗಾರ ಆಗಿದ್ದರು. ಕೆಂಪೇಗೌಡರತಂಹ ಮಹಾನ್ಸಾಧಕರ ವಂಶದಲ್ಲಿ, ಒಕ್ಕಲಿಗರಾಗಿ ಜನಿಸಿರುವ ನಾವುಗಳು ಹೆಮ್ಮೆ ಪಡಬೇಕಾಗಿದ್ದು, ಅವರ ಜೀವನದ ಆದರ್ಶಗಳಾದ ಪರೋಪಕಾರ, ನಮ್ಮ ನೆಲದ ಬಗೆಗಿನ ಪ್ರೀತಿ, ದೀನ ದಲಿತರ ಬಗೆಗಿನ ಕಾಳಜಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ ಶಿಪ್; ನೇರ ನಿಮ್ಮ ಖಾತೆಗೆ ಜಮಾ!
ಕಾರ್ಯಕ್ರಮದ ನಂತರ ಕೆಂಪೇಗೌಡರ ಸ್ಮರಣಾರ್ಥ ಸಂಘದ ವತಿಯಿಂದ ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿರುವ 80 ಒಳ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್, ಬಿಸ್ಕೆಟ್ ಹಾಗೂ ಸಣ್ಣಮಕ್ಕಳಿಗೆ ಪಾಂಪರ್ಸ್ ಸೇರಿದಂತೆ ಹಾಗೂ ಏನ್ ಆರ್ ಪುರದ ಅನಾಥಶ್ರಮದಲ್ಲಿರುವ 100 ಅನಾಥ ಸಹೋದರ ಸಹೋದರಿಯರಿಗೆ ಟವೆಲ್, ಹಾಗೂ ಹಣ್ಣು ಹಾಗೂ ಧನ ಸಹಾಯ ಮಾಡಲಾಯಿತು.
ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕ ಪೃಥ್ವಿರಾಜ್ ಕೌರಿ, ಹೇರೂರು ಯುವ ಒಕ್ಕಲಿಗ ವೇದಿಕೆಯ ಅಧ್ಯಕ್ಷ ವಿಜೇಂದ್ರ, ಕಾರ್ಯದರ್ಶಿ ವರುಣ್, ಖಜಾಂಚಿ ನಿರೀಕ್ಷಿತ್, ವಕೀಲರಾದ ರಜತ್, ಸಾಹಿತಿ ರವಿಕಾಂತ್, ಪ್ರಮುಖರಾದ ನಾಗರಾಜ್, ರಕ್ಷಿತ್, ರತೀಶ್ ಹಾಗೂ ಹೇರೂರು ಯುವ ಒಕ್ಕಲಿಗ ವೇದಿಕೆಯ ಸದಸ್ಯರುಗಳಿದ್ದರು.
ಇದನ್ನೂ ಓದಿ: ಮದ್ಯದಂಗಡಿ ಮಾಲೀಕರಿಗೆ ಗುಡ್ ನ್ಯೂಸ್; ಏನದು?













