
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನದ ಪರ ಜೈಕಾರ ಹಾಕಲಾಗಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲೂ ಪಾಕಿಸ್ತಾನ ಪರ ಘೋಷಣೆ ಮೊಳಗಿಸಿದ ಆರೋಪ ಕೇಳಿ ಬಂದಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ದೂರು ನೀಡಿವೆ. ಆದರೆ ಈ ಆರೋಪವನ್ನು ಮುಸ್ಲಿಂ ಮುಖಂಡರು ಅಲ್ಲಗೆಳೆದಿದ್ದಾರೆ.
ಇದನ್ನೂ ಓದಿ: 2,000 ಹಣ ಪಡೆಯಲು ತಪ್ಪದೇ ಈ ಕೆಲಸ ಮಾಡಿ

ತರೀಕೆರೆ ತಾಲೂಕಿನಾದ್ಯಂತ ಈ ವಿಡಿಯೋ ವೈರಲ್ ಆಗಿದ್ದು, VHP ಮುಖಂಡ ನಾರಾಯಣಪ್ಪ ಕೊಟ್ಟ ದೂರಿನ ಮೇರೆಗೆ 292, 197, 353(2) ,199 BNS ಅಡಿ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನಿವಾಸಿ ಯಾಸೀನ್ ಮತ್ತು ಇತರರ ಮೇಲೆ FIR ದಾಖಲು ಮಾಡಲಾಗಿದೆ. ಜೊತೆಗೆ ಈ ವಿಡಿಯೋ ವನ್ನ FSLಗೆ ಪೊಲೀಸ್ ಇಲಾಖೆ ರವಾನೆ ಮಾಡಿದ್ದಾರೆ.

ಇದೇ ಸಪ್ಟೆಂಬರ್ 13 ರಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಈದ್ ಮೆರವಣಿಗೆ ಹಿನ್ನೆಲೆಯಲ್ಲಿ ತರೀಕೆರೆ ಪಟ್ಟಣದಲ್ಲಿ ಅಲಂಕಾರ ಮಾಡಲಾಗಿದೆ. ತರೀಕೆರೆ ಪಟ್ಟಣದ ಕೋಡಿ ಕ್ಯಾಂಪ್ ಬಳಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತರೀಕೆರೆ ಪಟ್ಟಣದಲ್ಲಿ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: 10th ಪಾಸಾದವರಿಗೆ ಸರ್ಕಾರಿ ಉದ್ಯೋಗ; 21,000 ಸಂಬಳ
ಇನ್ನು ಪಾಕ್ ಪರ ಘೋಷಣೆ ಆರೋಪವನ್ನು ಮುಸ್ಲಿಂ ಮುಖಂಡರು ಅಲ್ಲಗಳೆದಿದ್ದಾರೆ. ನಾವು ಯಾವುದೇ ಘೋಷಣೆ ಕೂಗಿಲ್ಲ. ನಾವು ಭಾರತೀಯ ಮಕ್ಕಳು. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂಬ ವಿಡಿಯೋ ವೈರಲ್ ಆಗುತ್ತಿದೆ ಅದು ಆ ರೀತಿ ಅಲ್ಲ. ಯಾಸೀಂದಾ ಕಿ ಜೈ, ಇಸ್ಲಾಂ ಜಿಂದಾಬಾದ್ ಎಂದು ಕೂಗಿದ್ದಾರೆ. ಇದೇ ಭಾರತೀಯ ಮಕ್ಕಳು ನಾವು. ಇದೇ ಮಣ್ಣಲ್ಲಿ ಹುಟ್ಟಿ ಇದೇ ಮಣ್ಣಲ್ಲಿ ನಾವು ಸಾಯ್ಬೇಕು ಅಂತ ಮುಸ್ಲಿಂ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳಿಗೆ ರಿಯಾಯಿತಿ ಹೆಚ್ಚಳ













