ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತುಂಗಾ ನದಿಗೆ ಹಾರಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಮುತ್ತಿನಕೊಪ್ಪ ಗ್ರಾಪಂನ ಜಯಂತಿ ಕಾಲನಿ ಗ್ರಾಮದ ಕೆ.ಕಣಬೂರು ದೇವು (57) ಆತ್ಮಹತ್ಯೆ ಮಾಡಿಕೊಂಡ ರೈತ.
ಇದನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!

ದೇವು ಭಾನುವಾರ ಮಧ್ಯಾಹ್ನ ಮನೆ ಬಿಟ್ಟು ಹೋದವರು ಮರಳಿ ಬಂದಿರಲಿಲ್ಲ. ಸಂಜೆ ವೇಳೆಗೆ ತುಂಗಾ ನದಿ ದಡದಲ್ಲಿ ಅವರ ಚಪ್ಪಲಿ ಕಂಡುಬಂದಿತ್ತು. ಸಂಜೆ 6.45ರ ಸುಮಾರಿಗೆ ನದಿಯಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್
ದೇವು ನಾಲ್ಕು ಎಕರೆ ಜಮೀನು ಹೊಂದಿದ್ದರು. ಜಮೀನು ಅಭಿವೃದ್ಧಿಗಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ನಿರಂಜನ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಆಕರ್ಷಕ ಸಂಬಳ













