ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ ನಲ್ಲಿ ಆಸ್ತಿ ವಿವರವನ್ನು ಘೋಷಿಸಿದ್ದು, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಗಿಂತ ಜಯಪ್ರಕಾಶ್ ಹೆಗ್ಡೆ ಅವರ ಆಸ್ತಿ ಸರಿಸುಮಾರು 5 ಪಟ್ಟು ಜಾಸ್ತಿ ಇದೆ.
ಇದನ್ನೂ ಓದಿ; ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ; 1113 ಹುದ್ದೆಗಳಿಗೆ ಅರ್ಜಿ ಆಹ್ವಾನ


ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

ಜಯಪ್ರಕಾಶ್ ಹೆಗ್ಡೆ ಅವರ ಬಳಿ ನಗದು- 85,000, ಪತ್ನಿ ಶೋಭಾ ಜಿ. ಹೆಗ್ಡೆ ಅವರ ಬಳಿ ನಗದು 92,000 ಇದೆ. ವಿವಿಧ ಬ್ಯಾಂಕ್ ಗಳಲ್ಲಿ ಹೆಗ್ಡೆ ಹೆಸರಲ್ಲಿ 31,02, 324 ಪತ್ನಿ ಶೋಭಾ 6,34,219 ನಗದು ಇದ್ದರೇ, ಶೇರು ಬಾಂಡ್ ಗಳ ಮೂಲಕ ಹೆಗ್ಡೆ 34,000 ರೂ. ಪತ್ನಿ ಶೋಭಾ ಅವರು 7,79,136 ರೂ. ಹೂಡಿಕೆ ಮಾಡಿದ್ದಾರೆ. ಪತ್ನಿ ಶೋಭಾ 2,27,188 ವಿಮೆ ಮಾಡಿದ್ದಾರೆ.
ಜಯಪ್ರಕಾಶ ಹೆಗ್ಡೆ ಅವರ ಬಳಿ 3,13,000 ರೂ. ಮೌಲ್ಯದ ಚಿನ್ನವಿದ್ದರೇ, ಪತ್ನಿ ಶೋಭಾ ಅವರ ಬಳಿ 64,41,000 ರೂ. ಮೌಲ್ಯದ ಚಿನ್ನವಿದೆ.
ಒಟ್ಟು ಚರಾಸ್ತಿ : ಜಯಪ್ರಕಾಶ್ ಹೆಗ್ಡೆ ಅವರ ಬಳಿ 35,34,326 ರೂ. ಇದ್ದರೇ, ಅವರ ಪತ್ನಿ ಶೋಭಾ ಅವರ ಬಳಿ 81,46,544 ರೂ. ಇದೆ.
ಇದನ್ನೂ ಓದಿ; ಮತದಾರರೇ ಗಮನಿಸಿ; ವೋಟರ್ ಲಿಸ್ಟ್ ನಲ್ಲಿ ಹೆಸರು ಸೇರ್ಪಡೆಗೆ ಇನ್ನೂ ಇದೆ ಕಾಲಾವಕಾಶ
ಹೆಗ್ಡೆ ಅವರ ಬಳಿ 13,12,61,587 ರೂ. ಮೌಲ್ಯದ ಸ್ಥಿರಾಸ್ತಿ ಇದರೇ, ಪತ್ನಿ ಶೋಭಾ ಅವರ ಹೆಸರಿನಲ್ಲಿ 1,05,00,180 ರೂ. ಸ್ಥಿರಾಸ್ತಿ ಇದೆ. ಹೆಗ್ಡೆ ಅವರು ಲೀಸ್ ಪಡೆದ ಹಣ 15,00,000 ರೂ. ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
2014 ರಲ್ಲಿ 85 ಲಕ್ಷ ರೂ.ಮೊತ್ತದ ಸಾಲವನ್ನು ಹೊಂದಿದ್ದ ಹೆಗ್ಡೆ ಅವರು ಈ ಬಾರಿಯ ಅಫಿಡವಿಟ್ ನಲ್ಲಿ ಕೇವಲ 15 ಲಕ್ಷ ರೂ.ಗಳ ಬ್ಯಾಂಕ್ ಸಾಲವನ್ನು ಘೋಷಿಸಿದ್ದಾರೆ. ಹೆಗ್ಡೆ ಅವರಿಗೆ ಹೋಲಿಸಿದರೆ ಅವರ ಪತ್ನಿಯವರ ಸಂಪತ್ತಿನಲ್ಲಿ ಹೆಚ್ಚಿನ ಹೆಚ್ಚಳವಾಗಿಲ್ಲ. ಅಲ್ಲದೇ ಪತ್ನಿ ಸಾಲದಿಂದಲೂ ಮುಕ್ತರಾಗಿದ್ದಾರೆ.
ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಬಡ್ಡಿಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!
ಹಾಗೆಯೇ ಹೆಗ್ಡೆ ಅವರ ವಿರುದ್ಧ ಯಾವುದೇ ಮೊಕದ್ದಮೆಯೂ ದಾಖಲಾಗಿಲ್ಲ.
ಚಿಕ್ಕಮಗಳೂರು: ಎರಡು ಪ್ರತ್ಯೇಕ ಗಾಂಜಾ ಪ್ರಕರಣ: ಇಬ್ಬರ ಬಂಧನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಪ್ರಕರಣದಲ್ಲಿ ಪ್ರತ್ಯೇಕವಾಗಿ ಇಬ್ಬರನ್ನು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮತ್ತೊಂದು ಪ್ರಕರಣದಲ್ಲಿ ಕಡೂರು ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪಿ.ಎಸ್.ಐ ಕಡೂರು ಪೊಲೀಸ್ ಠಾಣೆ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, 316 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













