
ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ ಅವರ ಪುತ್ರ ಸಚಿವ ಉದಯ ನಿಧಿ ಸ್ಟಾಲಿನ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಇದನ್ನು ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಟ್ಟೆ ಬಾಗಿಲಿನಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ- ಶೃಂಗೇರಿ ಇವರಿಂದ ಪ್ರತಿಭಟನೆ ಮಾಡಲಾಗಿತ್ತು.
ಇದನ್ನೂ ಓದಿ; ಪ್ರಧಾನಿ ಮೋದಿ ಭದ್ರತೆಗಿರುವ spg ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ಸಾವು; ಏನಿದು ದೇಶದಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ

ಈ ಅವಹೇಳನಕಾರಿಯ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶೃಂಗೇರಿ ಠಾಣೆಯ ಪೊಲೀಸ್ ಉಪ ನೀರಿಕ್ಷಕರಿಗೆ ಇವರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ-06.09.2023
ದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ ಚಿಕ್ಕಮಗಳೂರಿನಲ್ಲೂ ಬೀದಿಗಿಳಿದ ವಿ.ಹೆಚ್.ಪಿ, ಬಜರಂಗದಳ:
ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ನಿನ್ನೆ ಚಿಕ್ಕಮಗಳೂರು ನಗರದ ಅಜಾದ್ ವೃತದಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ; ವಾಟ್ಸಾಪ್ ನ ಈ 7 ಹೊಸ ಫೀಚರ್ ಬಗ್ಗೆ ತಿಳ್ಕೊಳ್ಳಿ; ಏನೆಲ್ಲಾ ಹೊಸ ಅಪ್ಡೇಟ್ ಇದೆ ಗೊತ್ತಾ
ಉದಯನಿಧಿ ಸ್ವಾಲಿನ್ ಅಣುಕು ಶವಯಾತ್ರೆ ನಡೆಸಿ, ಅಣುಕು ಮೃತದೇಹಕ್ಕೆ ಹಗ್ಗ ಕಟ್ಟಿ, ಮೃತದೇಹದ ಮೇಲೆ ಮಂಡಕ್ಕಿ ತೂರಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ತದನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ವಿ.ಹೆಚ್.ಪಿಯ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಸನಾತನ ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತಹ ಹೇಳಿಕೆ ನೀಡಿ ಹಿಂದುಗಳನ್ನು ಬೆದರಿಸುವ ಭಯ ಹುಟ್ಟಿಸುವಂತಹ ಧರ್ಮದ ಆಧಾರದಲ್ಲಿ ಮೂಲೋಚ್ಚಾಟನೆ ಮಾಡುವಂತಹ ಅಪರಾಧಿ ಬೆದರಿಕೆ ಹಾಕಿದ್ದಾರೆ. ಧರ್ಮದ ಆಧಾರದಲ್ಲಿ ಸನಾತನಿಗಳ ಡೆಂಗ್ಯೂ, ಮಲೇರಿಯಾ ಗಳಿಗೆ ಹೋಲಿಸಿ ಉದ್ದೇಶಪೂರ್ವಕ ಅವಮಾನ ಅಪಮಾನ ಮಾನಹಾನಿ ಮಾಡಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದುಗಳ ಭಾವನೆಯನ್ನು ಧಾರ್ಮಿಕತೆಯನ್ನು ಕಾಸಿಗೊಳಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ಭಜರಂಗದಳದ ಜಿಲ್ಲಾ ಸಹ ಸಂಯೋಜಕ ಶಾಮ್ ಮಾತನಾಡಿ, ಡೆಂಗ್ಯೂ, ಮಲೇರಿಯಾಗಳಿಗೆ ಸನಾತನ ಧರ್ಮವನ್ನು ಹೋಲಿಸಿದ್ದಾರೆ ಇದನ್ನು ಯಾವತ್ತು ಕ್ಷಮಿಸುವುದಿಲ್ಲ, ಹಿಂದೂ ಭಾವನೆಗಳಿಗೆ ದಕ್ಕೆ ತಂದಿದ್ದು, ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗಳನ್ನು ಒಪ್ಪುವುದಿಲ್ಲ, ಬಹುಸಂಖ್ಯಾಂತ ಹಿಂದೂ ಧರ್ಮವನ್ನು ಕೆಣಕಿದವರಿಗೆ ಉಳಿಗಾಲವಿಲ್ಲ ಉಳಿಸುವುದು ಇಲ್ಲ ಎಂದು ಆಕ್ರೋಶ ಹೊರಹಾಕಿದ್ದರು.
Chikkamagaluru: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ, ಮತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ಕಣಿವೆ ಕ್ರಾಸ್‍ನಲ್ಲಿ ಬುಧವಾರ ಸಂಜೆ ನಡೆದಿದೆ.
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ನಿರಂಜನ್(47), ಚೆನ್ನಮ್ಮ (67) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರತ್ನಮ್ಮ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಸಂಜೆ ನಿರಂಜನ್, ಚೆನ್ನಮ್ಮ ಹಾಗೂ ರತ್ಮಮ್ಮ ಎಂಬವರು ಕಾರಿನಲ್ಲಿ ಚಿಕ್ಕಮಗಳೂರಿನಿಂದ ಕಡೂರಿಗೆ ಹೊರಟಿದ್ದು, ಈವೇಳೆ ನಗರದ ಹೊರವಲಯದಲ್ಲಿರುವ ಕಣಿವೆ ಕ್ರಾಸ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್‍ಗೆ ಢಿಕ್ಕಿಯಾಗಿದೆ. ಢಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದ್ದು, ಅಪಘಾತದ ರಭಸಕ್ಕೆ ನಿರಂಜನ್ ಹಾಗೂ ಚೆನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸಖರಾಯಪಟ್ಟನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













