
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 2023 ನೇ ಸಾಲಿನ ಗಣೇಶೋತ್ಸವದ ಪ್ರಯುಕ್ತ ಕುಂಚೇಬೈಲ್ ನಲ್ಲಿ ವಿವಿಧ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ; ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?

ಶ್ರೀ ವಿನಾಯಕ ಸೇವಾ ಗೆಳೆಯರ ಬಳಗ, ಶ್ರೀ ಮಹಿಷಮರ್ದಿನಿ ಪುಣ್ಯ ಕ್ಷೇತ್ರ ಹುಲ್ಸುಗಾರು ಗಿಣಿಕಲ್ ಕುಂಚೇಬೈಲ್‌ನಲ್ಲಿ 7 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ 19.09.2023 ಅಪ್ಸರ ಮ್ಯೂಸಿಕಲ್ ಶೃಂಗೇರಿ, ಆಶಿಶ್ ದೇವಾಡಿಗ ಇವರಿಂದ ವಿ.ಎಸ್.ಏ. ಲೈವ್ ಅರ್ಕ್ರೆಸ್ಟ್ರಾ ನಡೆಸಲಾಗುತ್ತದೆ. 21.09.2023 ರಂದು ಪುರುಷರಿಗೆ ಕೆಸರುಗದ್ದೆ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ಮಕ್ಕಳಿಗೂ ಕ್ರೀಡಾಕೂಟ ಇರುತ್ತದೆ.

ಇದನ್ನೂ ಓದಿ; 14 ನ್ಯೂಸ್ ಆ್ಯಂಕರ್ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?
ಈ ಪಂದ್ಯಾವಳಿಗೆ ಷರತ್ತುಗಳು:
* ಪುರುಷರ ಹಗ್ಗಜಗ್ಗಾಟದ ತಂಡವು 6 ಜನ 420 ಕೆಜಿ ತೂಕದ ಮೀಸಲಿಡಲಾಗಿದೆ.
* ಮಹಿಳೆಯರಿಗೆ ಯಾವುದೇ ರೀತಿಯ ತೂಕದ ಮಿತಿ ಇರುವುದಿಲ್ಲ.
* ವಾಲಿಬಾಲ್ ತಂಡವು 4 ಜನ ಒಳಗೊಂಡಿರಬೇಕು.
ಇದನ್ನೂ ಓದಿ; arecanut price: 15 ಸೆಪ್ಟೆಂಬರ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಪ್ರತಿ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡವು ಸ್ಥಳೀಯರ ತಂಡವು. 700 ರೂ
ಹೊರಗಿನ ತಂಡವು. 1000 ರೂ ಗಳನ್ನು ನೀಡಿ 21.09.2023 ಬೆಳ್ಳಗೆ 10 ಗಂಟೆಯ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ಗೆದ್ದಂತಹ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
1. Contact 6362346591
2. Contact 6362857073
3. Contact 8618229078
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರವಾಸದಲ್ಲಿರುವಾಗಲೇ ವೈದ್ಯನ ಮೇಲೆ ಚಾಕು ಇರಿತ
ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ವೈದ್ಯ ಗಣೇಶ್ ತೋಟದ ಕಾರ್ಮಿಕರ ಮೇಲೆ, ಪಕ್ಕದ ತೋಟದ ಕಾರ್ಮಿಕರಿಂದ ಹಲ್ಲೆ ನಡೆದಿತ್ತು, ಕೂಡಲೇ ಚಿಕಿತ್ಸೆಗೆಂದು ಸ್ಥಳಕ್ಕೆ ಹೋದ ವೈದ್ಯ ಗಣೇಶ್ ಮೇಲೂ ಕೂಡ ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ಮಾಡಲಾಗಿದೆ.
ತೀವ್ರ ಅಸ್ವಸ್ಥರಾಗಿದ್ದ ವೈದ್ಯ ಗಣೇಶ್ ನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಸಚಿವ ದಿನೇಶ್ ಗುಂಡೂರಾವ್ ಹಲ್ಲೆಗೊಳಗಾದ ವೈದ್ಯ ಗಣೇಶ್ ಅವರ ಆರೋಗ್ಯವನ್ನು ವಿಚಾರಿಸಿದರು.
ಇದನ್ನೂ ಓದಿ; arecanut price: 15 ಸೆಪ್ಟೆಂಬರ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಹಲ್ಲೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













