ಇಂಡಿಯನ್‌ ಹ್ಯಾಂಡ್‌ಬಾಲ್‌ ಟೀಂಗೆ ಆಯ್ಕೆಯಾದ ಚಿಕ್ಕಮಗಳೂರಿನ ಯುವಕ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 18ನೇ ಏಷ್ಯನ್ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್ ಭಾರತ ತಂಡಕ್ಕೆ ಮಲೆನಾಡಿನ ಹುಡುಗ ಆಯ್ಕೆ ಆಗಿದ್ದಾನೆ.


ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ


ಹೌದು, ಚಿಕ್ಕಮಗಳೂರಿನ ತಾರಾಮಾಣಿ ಹಾಗೂ ಗಿರೀಶ್ ಅವರ ಪುತ್ರ ಯಶಸ್, 18ನೇ ಏಷ್ಯನ್ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ ಅಂಡರ್ 20 ಭಾರತ ತಂಡಕ್ಕೆ ಆಯ್ಕೆ ಆಗಿದ್ದಾನೆ. ಜುಲೈ 14 ರಿಂದ 26 ರ ವರೆಗೆ ಜೋರ್ಡಾನ್ ರಾಜಧಾನಿ ಅಮ್ಮಾನ್‌ನಲ್ಲಿ ಈ ಚಾಂಪಿಯನ್ ಶಿಪ್ ಗೆ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲೆಯಿಂದ ಪ್ರಪ್ರಥಮವಾಗಿ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಅವಕಾಶ ಯಶಸ್ ಅವರಿಗೆ ದೊರೆತಿದೆ. ಅಲ್ಲದೆ ಭಾರತ ತಂಡಕ್ಕೆ ಆಯ್ಕೆಯಾದ ಏಕೈಕ ಕನ್ನಡಿಗನೂ ಯಶಸ್ ಆಗಿದ್ದಾರೆ.


ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್‌ ಶಾಕ್‌; ಇನ್ಮುಂದೆ 1.70 ಲಕ್ಷ ಮಹಿಳೆಯರಿಗೆ ಬರಲ್ಲ ಗೃಹಲಕ್ಷ್ಮಿಯ 2000 ಹಣ!


ಯಶಸ್ ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನಲ್ಲಿ 2ನೇ ವರ್ಷದ BE ವಿದ್ಯಾಭ್ಯಾಸ ಮಾಡುತ್ತಿದ್ದು, 5 ಬಾರಿ ಹ್ಯಾಂಡ್‌ಬಾಲ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ, ಕಳೆದ ಬಾರಿ ಕರ್ನಾಟಕ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು.


ಇದನ್ನೂ ಓದಿ: ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ; 1.73 ಲಕ್ಷ BPL ರೇಷನ್ ಕಾರ್ಡ್ ವಿತರಣೆ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.