
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಸ್ಪರ್ಶದಿಂದ 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಲ್ಲೇನಹಳ್ಳಿ ಸಮೀಪದ ನಿಂಗೇನಹಳ್ಳಿ ನಿವಾಸಿ ವಿವೇಕ್ (14) ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ವಿದ್ಯಾರ್ಥಿ.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಹೊಲದಲ್ಲಿದ್ದ ನೀರಿನ ಮೋಟರ್ ಆನ್ ಮಾಡಲು ಹೋದಾಗ ಸ್ಥಳದಲ್ಲೇ ಕುಸಿದು ಬಿದ್ದು ವಿವೇಕ್ ಸಾವಪ್ಪಿದ್ದಾನೆ. ಮಲ್ಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿವೇಕ್, ಇಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಶಾಲೆಗೆ ತೆರಳದೆ ಹೊಲಕ್ಕೆ ಹೋಗಿದ್ದ. ಮಗನ ಅಕಾಲಿಕ ಸಾವಿನಿಂದ ಪೋಷಕರು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮಟ್ಟಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ













