
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಹುಣ್ಣಿಮೆ ಪೂಜೆ ನಡೆಸುತ್ತಿದ್ದಾರೆ. ಹುಣ್ಣಿಮೆ ಪೂಜೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದು, ದತ್ತ ಪಾದುಕೆ ದರ್ಶನ, ಪೂಜೆ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ; SSLC ಪಾಸ್ ಆದವರಿಗೆ ಗುಡ್ ನ್ಯೂಸ್; SSC GD ಕಾನ್ಸ್ ಟೇಬಲ್ ಗೆ ಅರ್ಜಿ ಆಹ್ವಾನ
ಪ್ರತಿ ಹುಣ್ಣಿಮೆ ದಿನ ಭಜರಂಗದಳ, ಬಿಜೆಪಿ ಕಾರ್ಯಕರ್ತರು ದತ್ತ ಪಾದುಕೆಗೆ ಪೂಜೆ ಸಲ್ಲಿಸುತ್ತಿದ್ದರು. ಈಗ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಹುಣ್ಣಿಮೆ ಪೂಜೆ ನೆರವೇರಿಸಲಿದ್ದಾರೆ. ಬೈಕ್ ಜಾಥಾದ ಮೂಲಕ ಕಾರ್ಯಕರ್ತರು, ದತ್ತಪೀಠಕ್ಕೆ ತೆರಳಲಿದ್ದಾರೆ. ಡಿಸೆಂಬರ್ 17 ರಿಂದ ದತ್ತಜಯಂತಿ ಆರಂಭವಾಗಲಿದೆ.

ರಸ್ತೆ ವಿಸ್ತರಣೆಗೆ ಬಲಿಯಾಗಲಿವೆ ಬೃಹತ್ ಮರಗಳು
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕಾಡು ಬೆಳಿಸಿ ನಾಡು ಉಳಿಸಿ, ಮನೆಗೊಂದು ಮರ ಊರಿಗೊಂದು ವನ, ಗಿಡ ಮರಗಳನ್ನ ಬೆಳಿಸಿ ಪರಿಸರ ಕಾಪಾಡಿ. ಹೀಗಂತ ಹೇಳಿ ಬೃಹತ್ತಾಗಿ ಬೆಳೆದಿರುವ ನೂರಾರು ಮರಗಳ ಮಾರಣ ಹೋಮ ಮಾಡಲು ರೆಡಿಯಾಗಿದೆ.
ತೀರ್ಥಹಳ್ಳಿ-ಕೋಣಂದೂರು ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಂಡಿದೆ. ಮರ ಕಡಿತಲೆಗೆ ಅರಣ್ಯ ಇಲಾಖೆಯ ಕಾನೂನು ಅಡ್ಡಿಯಾಗುವ ಕಾರಣ ಮರಗಳನ್ನು ಉರುಳಿಸುವ ತಂತ್ರ ಅನುಸರಿಸಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ನೆರಳು ನೀಡಲು ಬೆಳೆಸಿದ್ದ ಪುರಾತನ ಕಾಲದ ಹಲವು ಜಾತಿಯ ಮರಗಳು ಧರೆಗುರುಳುವ ಆತಂಕ ಎದುರಾಗಿದೆ.
ರಸ್ತೆ ವಿಸ್ತರಣೆ ಮರಗಳ ಮಾರಣ ಹೋಮ:
ಆರಗ, ಕೋಣಂದೂರು, ಹಾದಿಗಲ್ಲು, ಹುಂಚ, ರಿಪ್ಪನ್ ಪೇಟೆ ರಾಜ್ಯ ಹೆದ್ದಾರಿ ಮಾರ್ಗವಾಗಿ ಆನಂದಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ದೊರೆತಿದೆ. ಕೋಟೆಗದ್ದೆಯಿಂದ ಹಾದಿಗಲ್ಲುವರೆಗೆ ಅಂದಾಜು 25 ಕೋಟಿ ವೆಚ್ಚದಲ್ಲಿ 5.75 ಕಿ.ಮೀ. ದೂರದ 7 ಮೀಟರ್ ಅಗಲದ ಕೋಣಂದೂರು ಚತುಷ್ಪಥ ರಸ್ತೆಗೆ ನೀಲನಕ್ಷೆ ತಯಾರಾಗಿದೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…
ಈಗಾಗಲೇ ಆರಗ, ಹಿರೇಸರ, ಜಯಪುರ, ಗುಡ್ಡೇಕೊಪ್ಪ, ತ್ಯಾರಂದೂರು, ಕೋಟೇಗದ್ದೆ, ಕೌರಿಕಾನು ಮಾರ್ಗದ ರಸ್ತೆಗಳ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ. ಕೇವಲ 8 ಕಿ.ಮೀ. ಅಂತರದಲ್ಲಿರುವ ೨೪೫ಕ್ಕೂ ಹೆಚ್ಚು ಮರಗಳನ್ನು ಉರುಳಿಸಿದ್ದಾರೆ ಎನ್ನಲಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮರಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳ ಪರಿಶೀಲನೆ ನಡೆಸಿ ಅರಣ್ಯ ಸಂಪತ್ತಿಗೆ ಹಾನಿ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಲೋಕೇಶ್ ಹೇಳಿದ್ದಾರೆ.












