ಚಿಕ್ಕಮಗಳೂರು: ಕಂದಾಯ ಭೂಮಿ ಅಕ್ರಮ: ಕಡೂರು ತಹಶೀಲ್ದಾರ್ ಆಗಿದ್ದ ಉಮೇಶ್ 3 ದಿನ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಕಂದಾಯ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಂತ ಆರೋಪ ಹಿಂದಿನ ತಹಶೀಲ್ದಾರ್ ಉಮೇಶ್ ವಿರುದ್ಧ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ್ದಂತ ತಂಡವು, ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿತ್ತು. ಇದೀಗ ಉಮೇಶ್ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಅಕ್ರಮ ಭೂ ಮಂಜೂರು ರೂವಾರಿ ಉಮೇಶ್ ಅಮಾನತು

ಕಾರವಾರದ ನೌಕಾನೆಲೆಯಲ್ಲಿ ಭೂ ಸ್ವಾಧೀನ ಅಧಿಕಾರಿಯಾಗಿದ್ದಂತ ಕಂದಾಯ ಅಧಿಕಾರಿ ಉಮೇಶ್ ನನ್ನು, ಪೊಲೀಸರು ಕಂದಾಯ ಭೂಮಿ ಅಕ್ರಮ ಆರೋಪದಲ್ಲಿ ಬಂಧಿಸಿದ್ದರು. ಬಂಧನದ ಬಳಿಕ, ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಜೊತೆಗೆ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆಯೂ ಕೋರಿದ್ದರು. ಈ ಹಿನ್ನಲೆಯಲ್ಲಿ ಕಡೂರು ತಾಲೂಕು ಜೆ ಎಂ ಎಫ್ ಸಿ ನ್ಯಾಯಾಲಯವು ಬಂಧಿತ ಆರೋಪಿತ ಅಧಿಕಾರಿ ಉಮೇಶ್ ಅನ್ನು ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಮೋದಿ ಭೇಟಿ ವೇಳೆ, ಬಿಜೆಪಿ ಶಾಸಕರ ಬಗ್ಗೆ ಟ್ವಿಟ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಸಿ.ಟಿ ರವಿ ಹೇಳಿದ್ದೇನ?

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧಪಟ್ಟ ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್ ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಂಬಂಧ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ತರೀಕೆರೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ; ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ

ಮೋದಿ ಭೇಟಿ ವೇಳೆ, ಬಿಜೆಪಿ ಶಾಸಕರ ಬಗ್ಗೆ ಟ್ವಿಟ್ ಮೂಲಕ ಕಾಂಗ್ರೆಸ್ ವ್ಯಂಗ್ಯ, ಸಿ.ಟಿ ರವಿ ಹೇಳಿದ್ದೇನು?

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೋದಿ ಭೇಟಿ ವೇಳೆ, ಬಿಜೆಪಿ ಶಾಸಕರ ಬಗ್ಗೆ ಟ್ವಿಟ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಹಿನ್ನೆಲೆ ನಗರದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಚಂದ್ರಯಾನ 140 ಕೋಟಿ ಜನರಿಗೆ ಸೇರಿದ್ದು ಎಂದು ಪ್ರಧಾನಿಯೇ ಹೇಳಿದ್ದಾರೆ. 140 ಕೋಟಿಯಲ್ಲಿ ಕಾಂಗ್ರೆಸ್ ಇದೆ ಎಂದು ಭಾವಿಸಿದ್ದೇನೆ ಇಲ್ಲ ಎಂದುಕೊಂಡರೆ ಅದು ಅವರ ದುರ್ದೈವಿ ಎಂದು ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ; ಶೃಂಗೇರಿ: ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಮರ ಕಡಿತ?;  ಕಾರ್ಯಾಚರಣೆಗಿಳಿದ ವನ್ಯಜೀವಿ ಸಂರಕ್ಷಣಾ ಇಲಾಖೆ

ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಅವರು ಇದ್ದಾರೆ ಎಂದು ಅಂದುಕೊಂಡಿದ್ದೇವೆ, ಅವರ್ಯಾಕೆ ನಾವಿಲ್ಲ ಎಂದುಕೊಳ್ಳುತ್ತಾರೆ, ನನಗೆ ಅರ್ಥವಾಗದ ಸಂಗತಿ ಜನರ ಜೊತೆ ಇರುವುದು ನಮಗೆ ಸಂತೋಷ ತರುವ ಸಂಗತಿ, ಜನಸಾಮಾನ್ಯರ ಜೊತೆ ಇರುವುದು ಕಾಂಗ್ರೆಸಿಗರಿಗೆ ಅಪರಾಧ ಅನ್ಸುತ್ತೆ, ಕಾಂಗ್ರೆಸ್ ಗರಿಗೆ ಜನಸಾಮಾನ್ಯರ ಜೊತೆ ಇದ್ದರೆ ಕೀಳಮೆಯ ಭಾವನೆ ಬರುತ್ತದೆ. ಕಾಂಗ್ರೆಸ್ಸಿಗರು ವಡ್ಡೋಲಗದ ಮೂಲಕ ತಮ್ಮನ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದರು.

ಚಂದ್ರಯಾನ-3 ಬಗ್ಗೆ ದೇಶವೇ ಸಂಭ್ರಮಿಸಿದೆ, ಒಂದು ಪಕ್ಷಕ್ಕೆ ಸೀಮಿತವಾದದ್ದುದ್ದಲ್ಲ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ನಮ್ಮವರು ಜನರ ಜೊತೆ ಇದ್ದು ಪ್ರಧಾನಿಯನ್ನ ಸ್ವಾಗತಿಸಿದ್ದಾರೆ ಪ್ರಧಾನಿ ನೇತೃತ್ವದಲ್ಲಿ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುತ್ತಿದೆ ಎಂದು ಹೇಳಿದರು.

ಬಿಜೆಪಿಗರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ, ಸಿ.ಟಿ ರವಿ ಹೇಳಿದ್ದೇನು?

ಯಾರಾದರೂ ಪಕ್ಷ ತೊರೆದು ಬಂದರೆ ಹಿಂದಿನ ಬೆಂಚ್ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿಗರು ಗೌರವದಿಂದ ಕರೆಯುತ್ತಿಲ್ಲ, ಗೌರವ ಇಲ್ಲದ ಜಾಗಕ್ಕೆ ಏಕೆ ಹೋಗಬೇಕು. ಗೌರವ ಇಲ್ಲದ ಜಾಗಕ್ಕೆ ಯಾರೂ ಹೋಗಲ್ಲ ಅನ್ನೋದು ನನ್ನ ನಂಬಿಕೆ ಹೋದರೆ ನಾವು ಯಾವ ಪರಿಸ್ಥಿತಿಯನ್ನ ಬೇಕಾದರೂ ಎದುರಿಸುತ್ತೇವೆ ಎಂದರು.

ಇದನ್ನೂ ಓದಿ; ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ

ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡಲ್ಲ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ

ಕೆಲವರು ನನ್ನನ್ನ ಕಳಿಸಲು ನೋಡುತ್ತಿದ್ದಾರೆ ಎಂದಿದ್ದಾರೆ. ನಾನು ಅದೇ ದಾಟಿಯಲ್ಲಿ ಉತ್ತರಿಸಿದ್ರೆ, ಕಳಿಸೋಕೆ ನೋಡ್ತಿದ್ದೇವೆ ಅನ್ನಿಸುತ್ತೆ. ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡಲ್ಲ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಉಳಿಯೋದು-ಹೋಗೋದು ಅವರಿಗೆ ಬಿಟ್ಟದ್ದು ಅವರು ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ, ಅಪಾರ್ಥವಾಗೂ ಕಲ್ಪಿಸೋಲ್ಲ ಯಾವುದೇ ಪರಿಸ್ಥಿತಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಕಾರ್ಯಕರ್ತರ ಬಲದ ಮೂಲಕ ಪಕ್ಷ ಕಟ್ಟಿದ್ದೇವೆ, ಕಾರ್ಯಕರ್ತರಿಂದಲೇ ಎಲ್ಲವನ್ನು ಎದುರಿಸುತ್ತೇವೆ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.