ಪ್ರತಿಭಾ ಕಾರಂಜಿ ಕಾರ್ಯಕ್ರಮದ ಛದ್ಮವೇಷ ಸ್ಪರ್ಧೆಯಲ್ಲಿ ಆದಿಶಂಕರಾಚಾರ್ಯರ ವೇಷ ಧರಿಸಿ ಗಮನ ಸೆಳೆದ ವಿದ್ಯಾರ್ಥಿ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) 2023-24 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಛದ್ಮವೇಷ ಸ್ಪರ್ಧೆಯಲ್ಲಿ ಆದಿಶಂಕರಾಚಾರ್ಯರ ವೇಷ ಧರಿಸಿ ಗಮನ ಸೆಳೆದಿದ್ದಾರೆ.

 

ಇದನ್ನೂ ಓದಿ; ಗಣೇಶ ಹಬ್ಬದ ಬಳಿಕವೂ ಚಿನ್ನದ ಬೆಲೆ ಏರಿಕೆ; ಬೆಳ್ಳಿ ತುಸು ಕಡಿಮೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ಬೆಲೆಪಟ್ಟಿ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆ ಕ್ಲಸ್ಟರ್ ಮಟ್ಟದ 2023-24 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸ.ಕಿ.ಪ್ರಾಥಮಿಕ ಶಾಲೆ ಬೆಳಗೊಳದಲ್ಲಿ ನಡೆದಿತ್ತು, ಈ ಕಾರ್ಯಕ್ರಮದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಎಲ್ ಪಿ.ಎಸ್ ವಿಭಾಗದ ಬೆಳಗೊಳ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆದ್ವಿ ಬಿ.ಹೆಚ್ ರವರು ಆದಿಶಂಕರಾಚಾರ್ಯರ ವೇಷ ಧರಿಸಿ ಎಲ್ಲರ ಗಮನ ಸೆಳೆದು ಪ್ರಥಮ ಸ್ಥಾನ ಪಡೆದು ತಾಲ್ಲೂಕು ಹಂತಕ್ಕೆ ಆಯ್ಕೆಯಾಗಿದ್ದಾರೆ.

 

ಇದನ್ನೂ ಓದಿ; ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು!; ಈ ಬಾರಿ ವಂಚನೆ ಆರೋಪ ಮಾಡಿದ್ದು ಯಾರು?

ಕುಮಾರಿ ಆದ್ವಿ ಬಿ.ಹೆಚ್ ಬೆಳಗೊಳದ ಹರೀಶ್ ಬಿಎಂ ಮತ್ತು ಸುನೀತ ರವರ ದಂಪತಿಗಳ ಪುತ್ರಿಯಾಗಿ ದ್ದಾರೆ. ಕ್ಲಸ್ಟರ್ ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಆದ್ವಿ ಬಿ.ಹೆಚ್ ಗೆ ಬೆಳಗೊಳ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ, ಸಹ ಶಿಕ್ಷಕ ನಾಗೇಶ್‌ರವರು ಅಭಿನಂದಿಸಿದರು.

 

ಚೈತ್ರ ಕುಂದಾಪುರ ಡೀಲ್ ಪ್ರಕರಣ | ಜಿಲ್ಲೆಯ ವಿವಿದ ಕಡೆ ಸ್ಥಳ ಮಹಜರು ಮುಗಿಸಿದ ಸಿಸಿಬಿ ಪೊಲೀಸರು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರು ಜಿಲ್ಲೆಯ ವಿವಿದ ಕಡೆ ಸ್ಥಳ ಮಹಜರು ನಡೆಸಿದ್ದಾರೆ.

ಇದನ್ನೂ ಓದಿ; ಚೈತ್ರಾ ಕುಂದಾಪುರ ಗ್ಯಾಂಗ್​ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?, ದೊಡ್ಡವರ ಹೆಸರು ಹೊರಬರುತ್ತಾ?

 

ವಂಚನೆಗೊಳಗಾದ ಗೋವಿಂದ ಬಾಬು ಪೂಜಾರಿಯನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಲ್ಲಿ ಓರ್ವನಾದ ಗಗನ್ ಕಡೂರುನನ್ನು ಇಂದು ಬೆಳಗ್ಗೆ ಚಿಕ್ಕಮಗಳೂರು ಪ್ರವಾಸಿ ಮಂದಿರಕ್ಕೆ ಕರೆತಂದಿದ್ದರು, ವಂಚನೆ ಪ್ರಕರಣದ ಪ್ರಮುಖ ಸಭೆಗಳು ನಡೆದಿದೆ ಎನ್ನಲಾದ ಚಿಕ್ಕಮಗಳೂರಿನ ಐಬಿಗೆ ಸ್ಥಳ ಪರಿಶೀಲನೆಗಾಗಿ ಗಗನ್ ಕಡೂರುನನ್ನು ಕರೆದುಕೊಂಡು ಬಂದಿದ್ದರು.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-19.09.2023

ಚಿಕ್ಕಮಗಳೂರಿನ ಇದೇ ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ನಡೆದ ಬಳಿಕ ವಿಶ್ವನಾಥ್ ಜೀ ಬೇಡಿ ಮಾಡಿಸಿದ್ದ ಚೈತ್ರ ಗ್ಯಾಂಗ್ ಈ ನಿಟ್ಟಿನಲ್ಲಿ ಸಿಸಿಬಿ ತಂಡ ಸ್ಥಳ ಮಹಜರು ನಡೆಸಿದ್ದು, ಇದಾದ ಬಳಿಕ ಗಗನ್ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದು, ಅದಾದ ಬಳಿಕ ಕೆ.ಎಂ.ರಸ್ತೆಯಲ್ಲಿರಯವ ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ಅಕೌಂಟ್ ನಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ನಗರದ ದೊಡ್ಡಪೇಟೆಯಲ್ಲಿರುವ ಕಟಿಂಗ್ ಶಾಪ್ ಗೂ ತೆರಳಲಿ ಪರಿಶೀಲನೆ ನಡೆಸಿದ್ದಾರೆ.

 

ಚಿಕ್ಕಮಗಳೂರು: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮಲೆನಾಡಿನ ಬೆಲ್ಜಿಯಂ ನಾಯಿಗಳು!

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮಲೆನಾಡಿನ ಬೆಲ್ಜಿಯಂ ನಾಯಿಗಳನ್ನು ಭಾರತೀಯ ಸೇನೆಯ ಬೆಂಗಳೂರು ಶಾಖೆಯ ಬೇಹುಗಾರಿಕೆ ವಿಭಾಗದ ಮುಖ್ಯಸ್ಥ ಕರ್ನಲ್ ಡಾ.ಜೈವಿನ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ; ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 19-09-2023

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ ಸುಮಾರು 4 ಕಿಲೋ ಮೀಟರ್ ನಷ್ಟು ದೂರದಲ್ಲಿರುವ ಕಡೇಗದ್ದೆ ನಿವಾಸಿಯಾಗಿರುವ ಚಕ್ರಪಾಣಿ ಕುಟುಂಬ ಇಡೀ ಕೊಪ್ಪಕ್ಕೆ ಮಾತ್ರವಲ್ಲದೆ ದೇಶ, ವಿದೇಶದಲ್ಲೂ ಆರ್ಯುವೇದ ಚಿಕಿತ್ಸೆಯಿಂದ ಹೆಸರುವಾಸಿಯಾಗಿದೆ. ಅಷ್ಟೆ ಅಲ್ಲದೆ ಚಕ್ರಪಾಣಿ ಅವರ ಮಗ ಡಾ.ರಾಘವೇಂದ್ರ ದಂಪತಿಗಳು ಕೊಪ್ಪ ತಾಲೂಕಿನ ಕಡೇಗದ್ದೆ ಗ್ರಾಮದಲ್ಲಿ ಆಯುರ್ವೇದಿಕ್ ಆಸ್ಪತ್ರೆ ನಡೆಸುತ್ತಿದ್ದಾರೆ.

ಒಂದು ಲಕ್ಷದ 20 ಸಾವಿರ ಬೆಲಬಾಳುವ ಮಲಿನಾಯ್ಸ್ ನ ಜಾತಿಯ ಶ್ವಾನಗಳನ್ನು ಕುಟುಂಬ ಸೇನಗೆ ನೀಡಿದೆ. ರಾಘವೇಂದ್ರ ಅವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿದ್ದ ಮೂರು ಬೆಲ್ಜಿಯಂ ನಾಯಿಗಳನ್ನ ಚಕ್ರಪಾಣಿ ಅವರ ಮೊಮ್ಮಕ್ಕಳಾದ ಸಾನ್ವಿ ಕಾರಂತ್ ಹಾಗೂ ಮಾನ್ವಿ ಕಾರಂತ್ ಅವರು ನಾಯಿಗಳನ್ನ ಭಾರತೀಯ ಸೈನ್ಯದ ಬೇಹುಗಾರಿಕೆ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಾಯಿ ಮರಿಗಳಿಗೆ ಮೀರತ್ನ ಆರ್.ವಿ.ಸಿ.ಕೇಂದ್ರದಲ್ಲಿ ತರಬೇತಿ ನೀಡಿ ಕಾಶ್ಮೀರದ ಗಡಿ ಪ್ರದೇಶಕ್ಕೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ; ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.