
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಸಮೀಪದ ದೇವನಗುಲ್ ಗ್ರಾಮದ ಸಂಜಯ್ ಹಾಗೂ ಸಂದೀಪ್ ಅವರ ಮನೆಯಲ್ಲಿ ಮಹಾನ್ ವೀರನಾಗಿ ಖ್ಯಾತಿ ಪಡೆದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವನ್ನು ಆಚರಿಸಲಾಯಿತು.
ಇದನ್ನೂ ಓದಿ: ಗೂಗಲ್ ಪೇನಲ್ಲಿ ಅದ್ಭುತವಾದ ವೈಶಿಷ್ಟ್ಯ ಪರಿಚಯ!; ಏನದು ಗೊತ್ತಾ?

ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಬಿನ್ನಾಡಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಅಪರೂಪದ ದೇಶಭಕ್ತ. ಇಂತಹ ಮಹಾನ್ ರಾಜನ ಜನ್ಮ ವಾರ್ಷಿಕೋತ್ಸವ ಆಚರಿಸುವ ಅವಕಾಶ ನಮಗೆ ಸಿಕ್ಕಿದ್ದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಸಂಜಯ್ ಗೌಡ ಕೊಟ್ಟಿಗೆಹಾರ ಮಾತನಾಡಿ, ಶಿವಾಜಿಯ ಜೀವನ ಚರಿತ್ರೆ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಅವರ ಅಮೋಘ ದೇಶಪ್ರೇಮ, ಶೌರ್ಯ ಹಾಗೂ ಆಡಳಿತ ತಂತ್ರದ ಮಹತ್ವ ತಿಳಿಯುತ್ತದೆ. ಇಂದು ಅವರ ಜನ್ಮದಿನವನ್ನು ನಮ್ಮ ಮನೆಯಲ್ಲಿ ಆಚರಿಸುವ ಸೌಭಾಗ್ಯ ಒದಗಿ ಬಂದಿದೆ ಎಂದರು.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಈ ಸಂದರ್ಭದಲ್ಲಿ ಸಂದೀಪ್, ಪ್ರಕಾಶ್, ಸುಂದರೇಶ್ ಗೌಡ, ಯಶೋದಮ್ಮ, ಅನುಷಾನರೇಂದ್ರ ಗೌಡ, ಚಂದನ, ಲೀಲಾನಾರಾಯಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ನಿಮ್ಮ ಬೆರಳುಗಳಲ್ಲಿ ಅಡಗಿದೆ ಈ ರಹಸ್ಯ!; ಕಿರುಬೆರಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ













