
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕಾರು ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಶಿವರಾಜಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಪಟ್ಟಣದ ಹೊರ ವಲಯದಲ್ಲಿರುವ ಶಿವರಾಜಪುರದಲ್ಲಿ ಸಣ್ಣ ಅಂಗಡಿ ಇಟ್ಟಕೊಂಡು ಮಾರುತಿ ವ್ಯಾನ್ ನಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾಯಕ ನಡೆಸುತ್ತಿದ್ದ ರಮೇಶ್ ಮೃತಪಟ್ಟವರು.

ರಮೇಶ್ ತನ್ನ ಮಾರುತಿ ವ್ಯಾನ್ ನಲ್ಲಿ ಊರಿನವರೊಬ್ಬರ ಮದುವೆ ಸಮಾರಂಭದ ಆಹ್ವಾನ ಪತ್ರಿಕೆ ವಿತರಿಸಲು ಶಿವಮೊಗ್ಗದ ಕಡೆ ತೆರಳಬೇಕಾಗಿತ್ತು. ಈ ನಡುವೆ ಶಿವರಾಜಪುರದ ಆಗುಂಬೆ ರಸ್ತೆಯ ಬದಿಯಲ್ಲಿರುವ ತನ್ನ ಅಂಗಡಿಯ ಎದುರು ಕಾರು ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಆಗುಂಬೆ ಕಡೆಯಿಂದ ಬರುತ್ತಿದ್ದ ಕಾರು ಏಕಾಏಕಿ ಎಡದಿಂದ ಸಂಪೂರ್ಣ ರಾಂಗ್ ಸೈಡ್‌ನಲ್ಲಿ ಬಲಕ್ಕೆ ನುಗ್ಗಿ ಬದಿಯಲ್ಲಿ ನಿಂತಿದ್ದ ಮಾರುತಿ ವ್ಯಾನ್ ಮತ್ತು ರಮೇಶನ ಮೇಲೆ ಅಪ್ಪಳಿಸಿದೆ.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













