
ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ನಿರ್ಮಾಣ ಹಂತದ ಸೇತುವೆಯ ಗುಂಡಿಗೆ ಬಿದ್ದು ಬೈಕ್ ಸವಾರ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಗೇಟ್ ಬಳಿ ನಡೆದಿದೆ. ಮಾಳೇನಹಳ್ಳಿ ಗ್ರಾಮದ ಪುಷ್ಪರಾಜ್ (45) ಮೃತ ಬೈಕ್ ಸವಾರ.
ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ.. ಏನಿದೆ ಇದರಲ್ಲಿ..?; ಅಲ್ಪಸಂಖ್ಯಾತರ ಕಲ್ಯಾಣ: ಹೆಚ್ಚಿನ ಘೋಷಣೆಗಳು – ಇಲ್ಲಿ ಹೈಲೈಟ್ಸ್

ತಮ್ಮಟದಹಳ್ಳಿ ಗೇಟ್ ಬಳಿ ಕಳೆದ 20 ದಿನಗಳಿಂದ ನಡೆಯುತ್ತಿದ್ದ ಸೇತುವೆ ಕಾಮಗಾರಿ ನಡೆಯುತ್ತಿದ್ದು, ನಿನ್ನೆ ರಾತ್ರಿ ಅಜ್ಜಂಪುರದಿಂದ ಮಾಳೇನಹಳ್ಳಿ ಗ್ರಾಮಕ್ಕೆ ಪುಷ್ಪರಾಜ್ ತೆರಳುವಾಗ ಬೈಕ್ ಸಮೇತ ಗುಂಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2025-26: SC/ST ಸಮುದಾಯಗಳಿಗೆ ಸಿದ್ದರಾಮಯ್ಯ ಗಿಫ್ಟ್
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸೌರ ಪಂಪ್ ಯೋಜನೆಗೆ 1 ಲಕ್ಷ ಸಹಾಯಧನ; ಸಂಪೂರ್ಣ ಮಾಹಿತಿ ಇಲ್ಲಿದೆ













