ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ನಡೆದಿದೆ. ಸಾಗರ (32), ಗಗನ್ ಎಸ್ ಜಾಧವ್ (25), ಗಗನ್ ಎಸ್ ದೇವಾಂಗ (26) ಬಂಧಿತ ಆರೋಪಿಗಳು.
ಇದನ್ನೂ ಓದಿ: ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳು ಬಂದ್; ಯಾಕೆ ಗೊತ್ತಾ?

ನಿನ್ನೆ ಅಜ್ಜಂಪುರ ಪಟ್ಟಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿ 38.000/- ರೂ ನಗದು ಹಣ, ಪೋರ್ಡ್ ಪಿಗೋ ಕಾರು ಅಂದಾಜು ಮೌಲ್ಯ 3 ಲಕ್ಷ ರೂ. ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಂಡು, ಮೂವರ ಆರೋಪೊಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಉಡುಪಿಯ ರಾಘವೇಂದ್ರ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಬಿಸಿಯೂಟ ತಯಾರಕರಿಗೆ ಗುಡ್ ನ್ಯೂಸ್; ಗೌರವಧನ ಹೆಚ್ಚಳ ಮಾಡಿ ಸರ್ಕಾರ ಆದೇಶ!
ಇನ್ನು ಈ ಕಾರ್ಯಾಚಾರಣೆಯಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪಿ.ಐ ವಿರೇಂದ್ರ ಎನ್ ನೇತೃತ್ವದಲ್ಲಿ ಪಿ.ಎಸ್.ಐ ತಿಪ್ಪೇಶ್.ಡಿ.ವಿ ಹಾಗೂ ಅಜ್ಜಂಪುರ ಠಾಣಾ ಸಿಬ್ಬಂದಿಗಳಾದ ಶ್ರೀನಿವಾಸ ಸಿಪಿಸಿ-230, ಶ್ರೀನಿವಾಸ, ಪಿಸಿ-39, ಶಿವರಾಜ್ ಕದ್ದುನವರ ಸಿಪಿಸಿ-483, ನಾಗರಾಜ್-ಸಿಪಿಸಿ-105 ಇದ್ದರು.
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ €18,750 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?















