ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗದು ಕಳವು ಮಾಡಿದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ; ಎಂಟ್ರಿ ಕೊಡ್ತಿದ್ದಾಗೆ ಎಲ್ಲಾ ಮಾಧ್ಯಮಗಳಿಗೆ, ರಾಜಕಾರಣಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಅರ್ನಬ್ ಗೋಸ್ವಾಮಿ

ಕುಶಾಲಗೌಡ ಬೀದಿಯ ಮನೆವೊಂದರಲ್ಲಿ 31.08.2023 ರಮದು 1.40 ಲಕ್ಷ ನಗದು ಕಳವು ಪ್ರಕರಣದಲ್ಲಿ ಪಿ.ಎಸ್.ಐ ಸಖರಾಯಪಟ್ಟಣ ಮತ್ತು ತಂಡ ಓರ್ವ ಆರೋಪಿಯನ್ನು 24 ಗಂಟೆಯೊಳಗಾಗಿ ಬಂಧಿಸಿದ್ದಾರೆ.

ಇದನ್ನೂ ಓದಿ; ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ವಾ?; ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಆಗಬೇಕಾ?
ಬಂಧಿತ ಆರೋಪಿಯಿಂದ ಕಳವು ಮಾಡಿದ್ದ 25 ಸಾವಿರ ಮೌಲ್ಯ 2 ಮೊಬೈಲ್ ಫೋನ್ ಮತ್ತು ರೂ. 27 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ದಾಳಿ | ಕಾಡಾನೆ ಕಾಲ್ತುಳಿತಕ್ಕೆ ವ್ಯಕ್ತಿ ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ಕಾಲ್ತುಳಿತಕ್ಕೆ ವ್ಯಕ್ತಿಯೊಬ್ಬರು ಸ್ಥಳಸಲ್ಲೇ ಸಾವನ್ನಪ್ಪಿರಿವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರೆನೂರು ಗ್ರಾಮದಲ್ಲಿ ನಡೆದಿದೆ. ದುರ್ಗಾ ಕಿನ್ನಿ (60) ಕಾಡಾನೆ ಕಾಲ್ತುಳಿತಕ್ಕೆ ಮೃತಪಟ್ಟ ವ್ಯಕ್ತಿ.
ಚಿಕ್ಕಮಗಳೂರು: ಕೈಕೊಟ್ಟ ವರುಣದೇವ | ಮಳೆಗಾಗಿ 37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಮಲೆನಾಡಿಗರು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಳೆಗಾಗಿ ಮಲೆನಾಡಿನ ಜನರು ಹಿಂದಿನ ಸಂಪ್ರದಾಯಕ್ಕೆ ಮಾರು ಹೋಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆಲವು ಗ್ರಾಮಗಳ ಜನತೆ ಹಿಂದಿನ ಸಂಪ್ರದಾಯ ಆಚರಣೆಗೆ ಮುಂದಾಗಿದ್ದಾರೆ.
ನರಸಿಂಹರಾಜಪುರ ತಾಲೂಕಿನ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಗ್ರಾಮದ ಜನತೆ ಮಳೆಗಾಗಿ ಪ್ರಾರ್ಥಿಸಿ ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತುತ್ತಿದ್ದಾರೆ. ಕಳೆದ 37 ವರ್ಷಗಳ ಹಿಂದೆ ಇದೇ ರೀತಿ ಮಳೆ ಅಭಾವ ಉಂಟಾಗಿತ್ತು. ಬರದ ಛಾಯೆ ಮೂಡಿತ್ತು. ಇಂತಹ ವೇಳೆಯಲ್ಲಿ ಇಲ್ಲಿನ ಜನರು ಬೆಟ್ಟ ಹತ್ತಿ ದೇವರದಲ್ಲಿ ಪ್ರಾರ್ಥಿಸಿದ್ದರು. ಗಂಗೇಗಿರಿ ಬೆಟ್ಟ ಹತ್ತಿ ಅಲ್ಲಿ ಪೂಜೆ ಸಲ್ಲಿಸಿದರೇ ಮಳೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಗಿರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕಳಸದಲ್ಲಿ ಅಲ್ಲಿನ ನೀರು ತಂದು, ಪೂಜೆ ಮಾಡಬೇಕು. 9 ದಿನಗಳ ಕಾಲ ಮಡಿಯಿಂದ ಇದ್ದು ಪೂಜೆ ಮಾಡಬೇಕು ಎಂಬ ಪ್ರತೀತಿ ಇದ್ದು, ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಜನರು ಮಳೆಗಾಗಿ ಪ್ರಾರ್ಥಿಸಿ ಬೆಟ್ಟ ಏರುತ್ತಿದ್ದಾರೆ. ಈ ವರ್ಷ ಮಳೆ ಕೈಕೊಟ್ಟಿದೆ. ಮಲೆನಾಡಿನಲ್ಲೇ ಮಳೆ ಕೊರತೆ ಉಂಟಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬಿತ್ತಿದ ಬೆಳೆ ಕೈ ಸೇರುತ್ತೋ ಇಲ್ಲವೋ ಎಂಬ ಆತಂಕ ಮನೆ ಮಾಡಿದ್ದು, ಹಿಂದಿನ ಸಂಪ್ರದಾಯಗಳ ಕಡೆ ಮುಖ ಮಾಡಿದ್ದಾರೆ.













