ಬಾಳೆಹೊನ್ನೂರು: 10 ಸಾವಿರ ಕೊಟ್ಟು ಗಾಂಜಾ ಖರೀದಿಸಿ ಪೊಲೀಸರ ಬಳಿ ಸಿಕ್ಕಿಬಿದ್ದ ಆರೋಪಿಗಳು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಗ್ರಾಮಗಳಲ್ಲಿ ಗಾಂಜಾ ಸೇರಿದಂತೆ ಇತರೆ ಮಾದಕ ಪದಾರ್ಥಗಳ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹದಿಹರೆಯದ ಯುವಕರು ಮತ್ತಿನ ಮೋಹಕ್ಕೆ ಬಿದ್ದು ಬದುಕು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹಿರೇಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೂವಿನಹಕ್ಲು ಸರ್ಕಲ್ ಬಳಿ 450 ಗ್ರಾಂ ಗಾಂಜಾ ಹೊಂದಿದ್ದ ಮೂವರನ್ನು ಬಾಳೆಹೊನ್ನೂರು ಪಿಎಸ್ಐ ದಿಲೀಪ್ ಕುಮಾರ್ ಮಿಂಚಿನ ಧಾಳಿ ನಡೆಸಿ ಬಂಧಿಸಿದ್ದಾರೆ.

 

ಇದನ್ನೂ ಓದಿ;  ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ

ಆರೋಪಿಗಳಾದ ಪ್ರಕಾಶ್ ಪೀಟರ್ ಡಿಸೋಜ, ವಿಜಯ ಶೆಟ್ಟಿ ಹಾಗೂ ಅಲೆಸ್ಟರ್ ಜೋಸೆಫ್ ತಾವ್ರೋ ಎಂಬುವವರು ಜಾನ್ಸನ್ ಎಂಬುವವರಿಂದ ಹತ್ತು ಸಾವಿರ ರೂ ನೀಡಿ ಗಾಂಜಾ 450 ಗ್ರಾಂ ಗಾಂಜಾ ಖರೀದಿಸಿದ್ದರು. ವಿಷಯ ತಿಳಿದ ಬಾಳೆಹೊನ್ನೂರು ಪೊಲೀಸರು ಗಾಂಜಾ ಸಮೇತ ಮೂವರು ಆರೋಪಿಗಳನ್ನು ಹಾಗೂ ಎರಡು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ಗಾಂಜಾ ಮಾರಾಟಗಾರ ಜಾನ್ಸನ್ ಪರಾರಿಯಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಬೇಸತ್ತು ಸ್ವಯಂ ಬಾಳೆ ಗಿಡ ನಾಶ ಮಾಡಿದ ರೈತರು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಕಾಡಾನೆ ಹಿಂಡಿನಿಂದ ಬೇಸತ್ತ ರೈತರು, ಸ್ವತಃ ತಾವೇ ಬೆಳೆಯನ್ನು ನಾಶಪಡಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮ ಸಮೀಪದ ಹಕ್ಕಿಮಿಕ್ಕಿ ಗ್ರಾಮದಲ್ಲಿ ನಡೆದಿದೆ.

 

ಇದನ್ನೂ ಓದಿ;  ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?

ಕಳೆದ 8 ದಿನದಿಂದ ಕಾಫಿತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡಿನಿಂದ ಕಾಫಿ, ಅಡಿಕೆ ಬೆಳೆ ಉಳಿಸಿಕೊಳ್ಳಲು ಬಾಳೆ ಗಿಡ ನಾಶ ಮಾಡಿದ್ದಾರೆ. ಸುಮಾರು ಎರಡು ಎಕರೆಗೂ ಅಧಿಕ ಪ್ರದೇಶದಲ್ಲಿ ಬಾಳೆ ಗಿಡವನ್ನು ಕಡಿದು ಹಾಕಿದ್ದಾರೆ. ಹಕ್ಕಿಮಿಕ್ಕಿ, ಅರೇನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆ ಹಿಂಡಿನ ದಾಂದಲೆಯಿಂದ ಬೆಳೆಗಳು ನಾಶವಾಗಿದೆ. ಇತ್ತ ಕಾಡಾನೆಯನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು.
ಚಿಕ್ಕಮಗಳೂರು: 10 ಲಕ್ಷದ ವಿದ್ಯುತ್ ಬಿಲ್ ಕಂಡು ಗ್ರಾಹಕ ಶಾಕ್!
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೆಸ್ಕಾಂ ಅಧಿಕಾರಿಗಳ ಎಡವಟ್ಟಿಗೆ ಗ್ರಾಹಕರೊಬ್ಬರಿಗೆ ಆಗಸ್ಟ್ ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಡಾಗಾ ಕಾಂಪ್ಲೆಕ್ಸ್ ನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್  ಬರೋಬ್ಬರಿ 10,26,054 ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ 5 ಸಾವಿರ ವರೆಗೂ ಬರುತ್ತಿತ್ತು. ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ.
ಇನ್ನು ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತ ಬಂದಿದ್ದೇವೆ. ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಸರಿಪಡಿಸಿಕೊಡುತ್ತೇವೆ ಎಂದು ಹೇಳಿ ನಾಲ್ಕು ದಿನಗಳಾಗಿದ್ದರೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೆಸ್ಕಾಂ ಎಇಇ ಲಿಂಗರಾಜು ಪ್ರತಿಕ್ರಿಯೆ ನೀಡಿದ್ದು, ಸಾಪ್ಟ್ ವೇರ್ ದೋಷದಿಂದ ಈ ರೀತಿಯಾಗಿರಬಹುದು. ಕೆಲವೆಡೆ 500 ಬದಲಿಗೆ 15 ಸಾವಿರ ಬಿಲ್ ತೋರಿಸುತ್ತಿದೆ. ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.