
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಹಿಟ್ ಅಂಡ್ ರನ್ ಕೇಸ್ ಪ್ರಕರಣದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆ ನಡೆಸಿದ ಐವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಶೃಂಗೇರಿಯ ಕಂಚಿ ನಗರ ವಾಸಿ ನಾಗೇಂದ್ರ, ಗುಂಡಗದ್ದೆಮಕ್ಕಿಯ ರವಿ ಸಂಜಯ್, ಕಂಚಿ ನಗರದ ಕೀರ್ತನ, ಶೃಂಗೇರಿಯ ಪ್ರಸಾದ್ ಹಾಗೂ ರಜಿತ್ ಬಂಧಿತ ಆರೋಪಿಗಳು.

ಏನಿದು ಪ್ರಕರಣ:
ಉಡುಪಿಯಿಂದ ಕೊಪ್ಪದ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಅನ್ಯಕೋಮಿನ ಕುಟುಂಬದ ಕಾರೊಂದು ಹರಿಹರಪುರ ಬಳಿ ಬೈಕಿಗೆ ಡಿಕ್ಕಿಯಾಗಿದ್ದು, ಆದರೆ ಕಾರು ಚಾಲಕ ನಿಲ್ಲಿಸದೇ ಹೋಗಿದ್ದಾನೆ. ಹೀಗಾಗಿ ಹರಿಹರಪುರ ಯುವಕರು ಶೃಂಗೇರಿ ಯುವಕರಿಗೆ ಕರೆ ಮೂಲಕ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದುಕೊಂಡ ಶೃಂಗೇರಿಯ ಯುವಕರು ಕಾರು ಅಡ್ಡ ಹಾಕಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಪೋಷಕರ ಗಮನಕ್ಕೆ; ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ!; ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
ಈ ವೇಳೆ ಶೃಂಗೇರಿ ಯುವಕರು ಕಾರಿನಲ್ಲಿದ್ದ ಉಡುಪಿ ಮೂಲದ ಕುಟುಂಬದವರ ಮೇಲೆ ಅವಾಚ್ಯ ಶಬ್ದ ಬಳಕೆ ಹಾಗೂ ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಶೃಂಗೇರಿ ಯುವಕರ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯಿರೋಪ ಮಾಡಲಾಗಿತ್ತು.
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ಕಾರು, ಹೋಂಡಾ ಆಕ್ಟಿವಾ ಸ್ಕೂಟಿ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: PM ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಬಿಡುಗಡೆ!; ಹಣ ಬಾರದೇ ಇದ್ರೆ ಈ ರೀತಿ ಮಾಡಿ
















