ಕೊಪ್ಪ; ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನ

ಕೊಪ್ಪ; (ನ್ಯೂಸ್ ಮಲ್ನಾಡ್ ವರದಿ) ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಡಾ. ಸಂದೀಪ್ ಆತ್ಮಹತ್ಯೆಗೆ ಯತ್ನಿಸಿರುವ ವೈದ್ಯ.

ಇದನ್ನೂ ಓದಿ; ಕೊಪ್ಪ: 14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಡೆತ್ ನೋಟ್ ನಲ್ಲಿ ಸಿಕ್ತು ಆಘಾತಕಾರಿ ಅಂಶ

ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಸಂದೀಪ್ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಾಳೆಹೊನ್ನೂರಿನ ತಮ್ಮ ಮನೆಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ವೈದ್ಯರು ಮನನೊಂದಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ; ಕಳ್ಳಸಾಗಣೆ ಮಾಡುತ್ತಿದ್ದ 4.8 ಕೋಟಿ ಮೌಲ್ಯ ಅಡಿಕೆ ವಶ

ಮಾತ್ರೆ ಸೇವಿಸಿ ತೀವು ಅಸ್ವಸ್ಥಗೊಂಡಿದ್ದ ವೈದ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ ಅಂತಿಮ ಪಟ್ಟಿ ಬಿಡುಗಡೆ; ಈ ಲಿಸ್ಟ್‌ ನಲ್ಲಿ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ

ಬ್ಯಾಂಕಿನಲ್ಲಿ ಮಹಿಳೆ ಮೈಮೇಲೆ ಬಂತು ದೇವರು

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬ್ಯಾಂಕಿಗೆ ಬಂದ ಮಹಿಳೆಯೊಬ್ಬರು ಅವಾಂತರ ಸೃಷ್ಟಿಮಾಡಿರುವ ಘಟನೆ ಒಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕಿಗೆ ಬಂದ ಮಹಿಳೆಯೊಬ್ಬರು 20 ಸಾವಿರ ರೂ. ಹಣ ನೀಡುವಂತೆ ಪಟ್ಟು ಹಿಡಿದು ಸತತ ಮೂರು ಗಂಟೆ ಮೈ ಮೇಲೆ ದೇವರು ಬಂದಿದೆ ಎಂದು ರಂಪಾಟ ಮಾಡಿದ್ದಾಳೆ.

20 ಸಾವಿರ ರೂ. ಚೆಕ್ ಕೊಟ್ಟು ರಂಪಾಟ:
ಬ್ಯಾಂಕ್ ಗೆ ಬಂದ ಮಹಿಳೆಯೊಬ್ಬರು 20 ಸಾವಿರ ರೂ. ಚೆಕ್ ಕೊಟ್ಟು, ಹಣ ನೀಡುವಂತೆ ತಿಳಿಸಿದ್ದಳು. ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ಆಕೆಯ ಖಾತೆಯಲ್ಲಿ 2 ಸಾವಿರ ರೂ. ಮಾತ್ರ ಇದ್ದು, ಹಣ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆ ತನಗೆ 20 ಸಾವಿರ ರೂ. ಹಣ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಳು.

ಮಹಿಳೆ ಮೈ ಮೇಲೆ ಬಂತು ದೇವರು:
ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಹಿಳೆ ಕೊನೆಗೆ ಕೂದಲು ಕೆದರಿಕೊಂಡು ಮೈ ಮೇಲೆ ದೇವರು ಬಂದಂತೆ ಆಡಲು ಶುರು ಮಾಡಿದಳು. ಇದರಿಂದ ಬ್ಯಾಂಕ್ ಸಿಬ್ಬಂದಿ ಮತ್ತು ಇತರೆ ಗ್ರಾಹಕರು ಆತಂಕಕ್ಕೀಡಾದರು. ಬ್ಯಾಂಕಿನ ಮಧ್ಯದಲ್ಲಿ ಚೇರ್ ಹಾಕಿ ಕುಳಿತುಕೊಂಡ ಮಹಿಳೆ, ‘ನಾನು ದೇವರು, ನನಗೆ ದುಡ್ಡು ಕೊಡಿ. ಈಗ ಹೊಟ್ಟೆ ಹಸಿವಾಗುತ್ತಿದೆ’ ಎಂದು ಮಾತನಾಡಲು ಆರಂಭಿಸಿದರು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಬ್ಯಾಂಕಿಗೆ ದೌಡಾಯಿಸಿ ಮಹಿಳೆಯನ್ನು ಸಮಾಧಾನಿಸಿ ಕಳುಹಿಸಲು ಯತ್ನಿಸಿದರು. ಆದರೆ ತಾನು ದೇವರು ಎಂದು ಆಕೆ ತಿಳಿಸಿ ಬ್ಯಾಂಕಿನಲ್ಲಿ ಮತ್ತಷ್ಟು ಕೂಗಾಟ ಮಾಡಿದಳು. ಆಕೆಯ ಪರಿಸ್ಥಿತಿ ಗಮನಿಸಿದ ಪೊಲೀಸರು 500 ರೂ. ಹಣ ನೀಡಲು ಮುಂದಾದರು. ಆಗ ಆಕೆ “ಇದು 500 ರೂ. ನನಗೆ 20 ಸಾವಿರ ರೂ. ಹಣ ಬೇಕು” ಎಂದು ಹಠ ಹಿಡಿದಳು.

ನಂತರ ಮಹಿಳೆಯ ತಾಯಿಯನ್ನು ಬ್ಯಾಂಕಿಗೆ ಕರಿಸಿದ ಪೊಲೀಸರು ಆಕೆಯನ್ನು ಸಮಾಧಾನಪಡಿಸಿದರು. ಮಹಿಳೆಯ ಅಸಹಾಯಕತೆ ಕಂಡು ಎಎಸ್‌ಐ ನಂಜುಂಡಪ್ಪ 500 ರೂ. ನೀಡಿ ಕಳುಹಿಸಿದರು. ಮಹಿಳೆ ಹೊರ ನಡೆಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.