
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿರತೆ ದಾಳಿಗೆ 5 ವರ್ಷದ ಮಗು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ನವಿಲೇಕಲ್ ಗುಡ್ಡ ಗ್ರಾಮದಲ್ಲಿ ಗುರುವಾರ(ನ.20) ಸಂಜೆ ನಡೆದಿದೆ. ಮೃತ ಮಗುವನ್ನು 5 ವರ್ಷದ ಸಾನ್ವಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕುಮ್ಮಾತ್ತಗಿರಿ ಗ್ರಾಮದ ಬಸವರಾಜ್, ಕೂಲಿ ಕೆಲಸಕ್ಕಾಗಿ ನವಿಲೇಕಲ್ಲು ಗುಡ್ಡ ಗ್ರಾಮಕ್ಕೆ ಬಂದಿದ್ದರು. ನಿನ್ನೆ ಮನೆಯ ಹಿಂದಿನ ಕೊಟ್ಟಿಗೆಯ ಬಳಿ ಮಗು ಇದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಮಗು ಕೂಗುತ್ತಿದ್ದಂತೆ ಓಡಿ ಬಂದ ಮನೆಯವರನ್ನು ಕಂಡ ಚಿರತೆ, ಮಗುವನ್ನು ಕಾಡಿನತ್ತ ಎಳೆದುಕೊಂಡು ಹೋಗಿದೆ. ಸ್ಥಳೀಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ!













