
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ನಾಳೆ ಕೊಪ್ಪದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಅನಧಿಕೃತ ಕಟ್ಟಡ ಕಟ್ಟಿದ್ದವರಿಗೆ ಬಿಗ್ ಶಾಕ್; ಯಾಕೆ ಗೊತ್ತಾ? ಇಲ್ಲಿದೆ ನೋಡಿ

ಸೋಮವಾರ (ನಾಳೆ) ಸಂಜೆ 4.30ಕ್ಕೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದ ವರೆಗೆ ಆಪರೇಷನ್ ಸಿಂಧೂರ, ಸೈನಿಕರನ್ನು ಬೆಂಬಲಿಸಿ ಶೃಂಗೇರಿ ಕ್ಷೇತ್ರ ಮಟ್ಟದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಅವಕಾಶ
ಚಿಕ್ಕಮಗಳೂರಿನಲ್ಲಿ 1000 ಅಡಿ ಉದ್ದದ ಬಾವುಟ ಹಿಡಿದು ಬೃಹತ್ ಮೆರವಣಿಗೆ:
ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೃಹತ್ ತಿರಂಗಾ ಯಾತ್ರೆ ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ನಡೆಯಿತು. ಓಂಕಾರೇಶ್ವರ ದೇಗುಲದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ 1000 ಅಡಿ ಉದ್ದದ ಬಾವುಟ ಹಿಡಿದು ಬೃಹತ್ ಮೆರವಣಿಗೆ ನಡೆಸಿದ್ದು, ಭಾರತೀಯ ಸೈನಿಕರ ಪರವಾಗಿ ಪಕ್ಷಾತೀತವಾಗಿ ನಡೆಸಿದ ಈ ತಿರಂಗಾ ಯಾತ್ರೆಯಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಹತ್ತಾರು ಮಾಜಿ ಸೈನಿಕರು, ಸಾವಿರಾರು ಜನ ರಾಷ್ಟ್ರಧ್ವಜ ಹಿಡಿದು ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದರು.
ಇದನ್ನೂ ಓದಿ: ಚಾಕೋಲೆಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಚಾಕೋಲೆಟ್ ನಲ್ಲಿ ಆಲ್ಕೋಹಾಲ್ ಅಂಶ ಪತ್ತೆ













