ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮುಂದಿನ ಗುರಿ ಮುಟ್ಟಲು ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಲು ಎಸ್‍ಎಸ್‍ಎಲ್‍ಸಿ ಕಾಲಘಟ್ಟ ಒಂದು ಬುನಾದಿಯಾಗಿ ಮುಂದಿನ ಅವರ ಭವಿಷ್ಯಕ್ಕೆ ಅಡಿಪಾಯವಾಗಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗುರುಗಳಾದ ಗುಣನಾಥ ಸ್ವಾಮೀಜಿಯವರು ಹೇಳಿದರು.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಆಯೋಜಿಸಿದ ಚಿಕ್ಕಮಗಳೂರಿನ ಎಲ್ಲಾ ಬಿಜಿಎಸ್ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಯಾಗಲು ವಿಜಯಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜ್ಞಾನವೆಂಬ ಹಂಡೆಯಲ್ಲಿ ಉತ್ತಮ ಶಿಕ್ಷಣ ಪಡೆದು ಮಂಡೆಯಲ್ಲಿ ತುಂಬಿಸಿಟ್ಟುಕೊಳ್ಳಬೇಕು ಪರೀಕ್ಷೆ ಎಂಬ ಭಯದಿಂದಲೇ ವಿದ್ಯಾರ್ಥಿ ಫಲಿತಾಂಶದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಾನೆ ಗುರುವಿನ ಕೃಪೆಯು ಈ ಭಯವನ್ನು ದೂರಗೊಳಿಸುವಲ್ಲಿ ಚಿಕಿತ್ಸೆಯಂತೆ ಕಾರ್ಯನಿರ್ವಹಿಸುವುದರಿಂದ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸಬೇಕು ಎಂದರು.

ಗುರುವಿನ ಮಾರ್ಗದರ್ಶನದಿಂದಲೇ ವಿದ್ಯಾರ್ಥಿಯ ಎಲ್ಲಾ ಸಂಕಷ್ಟಗಳೂ ಪರಿಹಾರವಾಗುತ್ತವೆ. ಗೆಲುವು ಮತ್ತು ಸೋಲುಗಳಲ್ಲಿ ಯಾವುದೇ ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ನಿಮ್ಮ ಕರ್ತವ್ಯಗಳನ್ನು ಸಮಚಿತ್ತದಿಂದ ಮಾಡುವಂತೆ ಭಗವಂತನ ಅನುಗ್ರಹವಾಗಿದೆ. ಯಾರ ಪ್ರಜ್ಞೆಯಲ್ಲಿ ದಿವ್ಯತ್ವವಿದೆಯೋ ಅವನಲ್ಲಿ ಯಶಸ್ಸು ಇರುತ್ತದೆ. ಮೌನವಾಗಿ ನಿಮ್ಮ ಸಾಧನೆಯನ್ನು ದೃಷ್ಠಿಯಿಟ್ಟು ನೋಡಿ, ನಿಮ್ಮ ಅನುಭವಕ್ಕೆ ನಿಮ್ಮ ಸಾಧನೆ ಬಂದಾಗ ನಿಮ್ಮ ಯಶಸ್ಸು ಹತ್ತಿರವಾಗುತ್ತದೆ. ಪರೀಕ್ಷೆಯನ್ನು ಹಲವು ಪ್ರೇರಣೆಗಳಿಂದ ಎದುರಿಸಿ ಎಂದರು.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 19 ನೇ ಕಂತಿನ 2000 ಹಣ ಜಮಾ!
ಹಲವಾರು ಕ್ರಿಯಾತ್ಮಕ ಪ್ರಯೋಗಗಳಿಂದ ಶೃಂಗೇರಿ ತಾಲ್ಲೂಕಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಥಮ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಮಕ್ಕಳ ನಿರಂತರ ಪ್ರಯತ್ನಗಳಿಂದ ತಾಲ್ಲೂಕು ಮತ್ತು ಜಿಲ್ಲೆಯ ಪ್ರಗತಿಯೊಂದಿಗೆ ವಿದ್ಯಾರ್ಥಿಯ ವೈಯಕ್ತಿಕ ಪ್ರಗತಿಯೂ ಸಾಧ್ಯವಾಗಿದೆ ಎಂದು ಬೆಳ್ತಂಗಡಿಯ ಪರಿಸರ ತಜ್ಞ ದುಗ್ಗಪ್ಪಗೌಡ ಹೇಳಿದರು.
ಮೌನ ಪ್ರಾರ್ಥನೆ, ಕೇಳಿಸಿಕೊಳ್ಳುವ ಕಲೆ, ಮೌನ ಓದು, ಸಂಖ್ಯೆಗಳ ಸ್ಮರಣೆ ಮುಂತಾದ ಅಂಶಗಳನ್ನು ಪ್ರಾಯೋಗಿಕವಾಗಿ ತೊಡಗಿಸಿಕೊಂಡು ಪರೀಕ್ಷೆಗೆ ತಯಾರಾಗಬೇಕು. ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಒತ್ತಡ ಬೀಳದಂತೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಪ್ರತಿ ಅಂಕವು ಮುಖ್ಯವಾಗಿದ್ದು, ಪಠ್ಯ ಕ್ರಮದ ಎಲ್ಲಾ ವಿಷಯವನ್ನು ಸರಿಯಾಗಿ ಅಭ್ಯಾಸ ಮಾಡಿಕೊಂಡಿರಬೇಕು ಎಂದು ಮನಶಾಸ್ತ್ರಾಜ್ಞರಾದ ಚಂದ್ರಕುಮಾರಿ ಎಸ್.ಡಿ ಹೇಳಿದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ; ಏನದು ಸೂಚನೆ?
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಸಿಇಒ ಕೆ.ಸಿ ನಾಗೇಶ್, ಕಾಲೇಜು ವಿಜ್ಞಾನ ವಿಭಾಗದ ಡೀನ್ ಸಂಜಯ್ ಮೀರ್ಜಿ, ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಕೊಪ್ಪ ಬಿಜಿಎಸ್ ಮಹಬಲೇಶ್, ಬಿಜಿಎಸ್ ಹಿರೇಕೊಡಿಗೆಯ ಸತೀಶ್, ಬಿಜಿಎಸ್‍ನ ಜಯಪುರದ ಮಂಜಪ್ಪ, ರವಿಚಂದ್ರ, ಅಭಿಲಾಷ್, ಸಂಧೀಪ್, ಭಾರತೀ, ವಿಶ್ರಾಂತ್ ಇದ್ದರು.













