
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಿನೂತನ ಯೋಜನೆಗೆ ಅಡ್ಡಗದ್ದೆ ಗ್ರಾಮ ಸಾಕ್ಷಿಯಾಗಲಿದೆ.
ಇದನ್ನೂ ಓದಿ; ಡಾ. ಬ್ರೋ ವೀಡಿಯೋ ಬ್ಯಾನ್ ಮಾಡಿದ ಯೂಟ್ಯೂಬ್

ರೈತ ನಿಧಿ – ಜ್ಞಾನ ನಿಧಿ – ಸೈನಿಕ ಸಮ್ಮಾನ್ – ಸಾಧಕ ಸಮ್ಮಾನ್ ಎಂಬ ನಾಲ್ಕು ಯೋಜನೆಗಳಿಗೆ ನಾಳೆ ಚಾಲನೆ ನೀಡಲಿದ್ದು ಅಡ್ಡಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಘವೇಂದ್ರ ಹಂಚಲಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಭಾರತ್ ವೇದಿಕೆ ಟ್ರಸ್ಟ್ (ರಿ) ಸಹಯೋಗದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-25.09.2023
ಏನಿದು ರೈತ ನಿಧಿ – ಜ್ಞಾನ ನಿಧಿ – ಸೈನಿಕ ಸಮ್ಮಾನ್ – ಸಾಧಕ ಸಮ್ಮಾನ್ ಯೋಜನೆ:
1. ರೈತ ನಿಧಿ:
ವಾಣಿಜ್ಯ ಬೆಳೆಗಳಿಗೆ ನೀಡಿದ ಮಹತ್ವದಿಂದಾಗಿ ಅಡ್ಡಗದ್ದೆಯ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃಷಿಗೆ ಮಹತ್ವ ಕಡಿಮೆಯಾಗುತ್ತಿದೆ, ರೈತರು ಭತ್ತದ ಕೃಷಿಯನ್ನು ಕೈಬಿಡುತ್ತಿರುವುದು ಭವಿಷ್ಯದ ಹಿತದೃಷ್ಟಿಯಿಂದ ಆಘಾತಕಾರಿ ಬೆಳವಣಿಗೆಯಾಗಿದೆ. ಇದನ್ನು ಸರಿಪಡಿಸಿ ಭತ್ತದ ಬೆಳೆಗಾರರಿಗೆ ಬೆನ್ನು ತಟ್ಟುವ, ಪ್ರೋತ್ಸಾಹ ನೀಡುವ, ಹುರಿದುಂಬಿಸುವ ಮತ್ತು ಅವರಿಗೆ ಆರ್ಥಿಕ ಸಹಕಾರ ನೀಡುವ ಯೋಜನೆಯೇ ಸಾಗುವಳಿ ಸವಾನ್. ಈ ಯೋಜನೆಯಲ್ಲಿ ಅಡ್ಡಗದ್ದೆ ಗ್ರಾಮ ವ್ಯಾಪ್ತಿಯ ಯಾವುದೇ ರೈತರು ತಮ್ಮ ಜಮೀನಿನಲ್ಲಿ ಭತ್ತವನ್ನು 2023-24ನೇ ಸಾಲಿನಲ್ಲಿ ಸಾಗುವಳಿ ಮಾಡಿದರೆ ಅವರಿಗೆ ಬೆಂಬಲವಾಗಿ ಪ್ರತಿ ರೈತಬಂಧುವಿಗೆ ರೂ. 1000/- (ಒಂದು ಸಾವಿರ ರೂ.ಗಳು) ಗಳ ಸಾಗುವಳಿ ಸಮ್ಮಾನ್ ನಿಧಿಯನ್ನು ಸಮರ್ಪಿಸಿ ಪುರಸ್ಕರಿಸಲಾಗುತ್ತಿದೆ. ಇದು ಭತ್ತದ ಕೃಷಿ ಕ್ಷೇತ್ರವನ್ನು ಅಡ್ಡಗದ್ದೆಯಲ್ಲಿ ವಿಸ್ತರಿಸುವ ಬಹು ದೊಡ್ಡ ಉದ್ದೇಶವಾಗಿದೆ.


2. ಜ್ಞಾನ ನಿಧಿ:
ಗ್ರಾಮದ ಹೊಸತಲೆಮಾರಿನ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು. ಕೃಷಿಯನ್ನು ಒಂದು ಗೌರವಯುತವಾದ ಜೀವನದ ದಾರಿಯಾಗಿ ಸ್ವೀಕರಿಸಬೇಕು, ಅದರಲ್ಲಿ ಆಸಕ್ತಿ ವಹಿಸಬೇಕು, ಪರಿಣಿತಿ ಸಾಧಿಸಬೇಕು ಎಂಬುದು ಈ ಯೋಜನೆಯ ಆಶಯವಾಗಿದೆ. ಕೃಷಿ ಕೀಳರಿಮೆಯ ಕಾಯಕವಲ್ಲ, ಅದು ದೈವೀ ಕಾರ್ಯ, ಆತ್ಮಗೌರವದ ಕಾಯಕ, ಆಹಾರ ಭದ್ರತೆಯನ್ನು ಒದಗಿಸುವ ರಾಷ್ಟ್ರಕಾರ್ಯ ಲಾಭದಾಯಕವೂ ಹೌದು ಎಂಬುದನ್ನು ಮನಗಂಡು ಕೃಷಿಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಬೇಕು. ಬಾಹ್ಯಾಕಾಶದ ಮನೋಭಾವ ನಿರ್ಮಿಸುವುದು ಹಿರಿಯರ ಹೊಣೆ. ಸಾಧನೆಗಳಂತೆ ಕೃಷಿ ಸಾಧನೆಗಳೂ ಶ್ರೇಷ್ಟವಾದದು. ಈ ಹಿನ್ನೆಲೆಯಲ್ಲಿ ಅಡ್ಡಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ತೊರೆಹಡ್ಲು ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರ ಪರಿಣಿತರ ಮಾರ್ಗದರ್ಶನದಲ್ಲಿ ಗದ್ದೆ ನಾಟಿ ಕಾರ್ಯದಲ್ಲಿ ಒಂದು ದಿನ ತೊಡಗಬೇಕು. ಹಾಗೆ ಒಂದು ದಿನ ನಾಟಿ ಅನುಭವ ಪಡೆದು ಹೆಮ್ಮೆಪಡುವ ಪ್ರೌಢಶಾಲೆಯ ಪ್ರತಿ ವಿದ್ಯಾರ್ಥಿಗಳಿಗೂ ತಲಾ ರೂ. 250/- ಗಳ ಪ್ರೋತ್ಸಾಹ ಧನವನ್ನು ನೀಡಿ ಹುರಿದುಂಬಿಸಲಾಗುತ್ತದೆ ಈ ಯೋಜನೆಯಲ್ಲಿ.
3. ಸೈನಿಕ ಸಮ್ಮಾನ್:
ದೇಶವನ್ನು ಗಡಿಗಳಲ್ಲಿ ಕಾಲು ಕಚ್ಚಿ ನಿಂತು ಜೀವದ ಹಂಗನ್ನು ತೊರೆದು ದೇಶವಾಸಿಗಳನ್ನು ಕಾಪಾಡುವಾತನೇ ಯೋಧ, ಯೋಧರನ್ನು ಸಮಾನ ಪೂರ್ವಕವಾಗಿ ಕಾಣಬೇಕಾದದ್ದು ದೇಶವಾಸಿಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ ವಾಸವಾಗಿರುವ ನಿವೃತ್ತ ಯೋಧರಲ್ಲಿ ಒಬ್ಬರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದು ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಮುಂದಿನ ಪೀಳಿಗೆಯು ಸೈನಿಕ ಸೇವೆಗೆ ಸೇರಲು ಸ್ಫೂರ್ತಿ ಪಡೆಯುತ್ತಾರೆ.
4. ಸಾಧಕ ರೈತ ಸಮ್ಮಾನ್:
ಕಳೆದ ಹಲವಾರು ದಶಕಗಳ ಕಾಲ ಅಡ್ಡಗದ್ದೆ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕೃಷಿ ಕಾರ್ಯದಲ್ಲಿ ತೊಡಗಿರುವ ಹಿರಿಯ ರೈತರನ್ನು ಸನ್ಮಾನಿಸುವ ಯೋಜನೆ ಇದಾಗಿದ್ದು, ಯಾವುದೇ ಕಷ್ಟ-ನಷ್ಟಗಳಿಗೆ ಅಂಜದೇ ನಿರಂತರವಾಗಿ ಉತ್ಸಾಹಭರಿತರಾಗಿ ಕೃಷಿ ಕಾರ್ಯವನ್ನು ಜೀವನದ ಉದ್ದಕ್ಕೂ ಮಾಡುವುದು ಮಹತ್ತಾದನೆಯೇ ಸರಿ. ಅಂತಹ ಹಿರಿಯ ಕೃಷಿ ಕಾಯಕ ನಿಷ್ಠರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಾ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುವುದೇ ಈ ಯೋಜನೆಯ ಉದ್ದೇಶವಾಗಿದೆ.
ಗ್ರಾಮದ ಪ್ರತಿಯೊಬ್ಬರಿಗೂ ದೂರದೃಷ್ಠಿಯಿಂದ ದುಡಿಯಬೇಕು. ಇಂತಹ ನೂರು ಕನಸುಗಳೊಂದಿಗೆ ಅಡ್ಡಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ತಂಡವು ಕಾರ್ಯ ಮಾಡುತ್ತಿದೆ. ಪಂಚಾಯಿತಿಯ ಸಹಕಾರದೊಂದಿಗೆ ಗ್ರಾಮವನ್ನು ಸ್ವಾವಲಂಭಿ ಸದೃಢಗೊಳಿಸಲು ಗ್ರಾಮ ಭಾರತ್ ವೇದಿಕೆ ಸಹ ಕೈ ಜೋಡಿಸಿದೆ. ಸಮಾಜದ ಕಟ್ಟಗಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ಕಟ್ಟಿಕೊಡಲು ಈ ಯೋಜನೆ ಸಿದ್ಧವಾಗಿದೆ.
ಆರ್ಥಿಕ ಸಹಾಯ ಮಾಡುವವರು:
ನಮ್ಮ ಅಡ್ಡಗದ್ದೆ – ನಮ್ಮ ಆದರ್ಶ ಗ್ರಾಮ ಪಂಚಾಯ್ತಿಯ ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಮೂಲಕ ತಾವೂ ಈ ಯೋಜನೆಗೆ ಕೈ ಜೋಡಿಸಬಹುದಾಗಿದೆ. ಸಂಪೂರ್ಣ ಪಾರದರ್ಶಕತೆಯೊಂದಿಗೆ ಈ ಕಾರ್ಯ ಮಾಡಲಾಗುತ್ತಿದೆ.
ಹೆಸರು: ಗ್ರಾಮ ಭಾರತ್ ವೇದಿಕೆ ಟ್ರಸ್ಟ್
ಶಾಖೆ: ಕೊಪ್ಪ ಶಾಖೆ
ಖಾತೆ ಸಂಖ್ಯೆ: 50200083772997
IFSC: HDFC0005226













