ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಸಾಗುವಳಿ ಭೂ ಮಾಲೀಕತ್ವ ಹೊಂದಿರುವ ರೈತರ ಮೇಲೆ ಅರಣ್ಯ ಒತ್ತುವರಿ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಇದೀಗ ಸಿದ್ಧತೆ ನಡೆಸಿದೆ.
ಹೌದು, ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಪಡೆದು ಸಾಗುವಳಿ ಭೂ ಮಾಲೀಕತ್ವ ಹೊಂದಿರುವ ರೈತರ ಮೇಲೆ ಕರ್ನಾಟಕ ಅರಣ್ಯ ಕಾಯಿದೆ 1963 ರ ಅನ್ವಯ ಒತ್ತುವರಿ ಪ್ರಕರಣ ದಾಖಲಿಸುವುದಕ್ಕೆ ಕ್ರಮ ವಹಿಸಿರುವ ಅರಣ್ಯ ನಿಯಮ 64 ರಡಿ ರೈತರಿಗೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ.

ಇದನ್ನೂ ಓದಿ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್ ನ್ಯೂಸ್; ಏನದು?

ಶತಮಾನಕ್ಕಿಂತ ಹಿಂದೆ ಭೂ ಹಕ್ಕು ಹೊಂದಿದ್ದರೂ ಒತ್ತುವರಿ ಪ್ರಕರಣ:
ಅರಣ್ಯ ಪ್ರದೇಶದಲ್ಲಿ ಶತಮಾನಕ್ಕಿಂತ ಹಿಂದೆ ಭೂ ಹಕ್ಕು ಹೊಂದಿದ್ದರೂ ಅಂತಹ ರೈತರ ಮೇಲೂ ಒತ್ತುವರಿ ಪ್ರಕರಣ ದಾಖಲಾಗಲಿದೆ. ಅಧಿಸೂಚಿತ ಅರಣ್ಯ ಪ್ರದೇಶವನ್ನು ರೈತರಿಂದ ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಬಿಗಿ ಕಾನೂನು ಕ್ರಮ ಕೈಗೊಳ್ಳುತ್ತಿದೆ.
ಮುಂಬರುವ ದಿನಗಳಲ್ಲಿ ಪಟ್ಟಣ, ನಗರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಕಂದಾಯ ಇಲಾಖೆ ನೀಡಿರುವ ಉಚಿತ ನಿವೇಶನ ಹಕ್ಕುಪತ್ರ, ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿರ್ಮಾಣ ಅಕ್ರಮ ಎಂದು ನಿರ್ಧರಿಸಿ ಒತ್ತುವರಿ ಪ್ರಕರಣ ದಾಖಲಿಸಲು ಚಿಂತಿಸಿದೆ.
ಇದನ್ನೂ ಓದಿ: ಭದ್ರತಾ ಪಡೆಯಲ್ಲಿ ಜಾಬ್ ಆಫರ್; SSLC ವಿದ್ಯಾರ್ಹತೆ, 21,700 ಸಂಬಳ
ಜಿಲ್ಲೆಯಲ್ಲಿ 32,318 ಎಕರೆಗೂ ಹೆಚ್ಚು ಭೂ ಮಂಜೂರಾತಿ ರದ್ದು:
ಈಗಾಗಲೇ ರೈತರ ಹೆಸರಲ್ಲಿರುವ ಆರ್‌ಟಿಸಿ, ಮ್ಯುಟೇಷನ್ ರದ್ದು ಕೋರಿ ವಲಯಾರಣ್ಯಾಧಿಕಾರಿಗಳು ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಆಡಳಿತ ನ್ಯಾಯಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ನೋಟಿಸ್ ಜಾರಿ ಆಗಿದೆ. ಶಿವಮೊಗ್ಗ ಅರಣ್ಯ ಸಂರಕ್ಷಣಾ ವಿಭಾಗದ ವೃತ್ತ ವ್ಯಾಪ್ತಿ ಸುಮಾರು 32,318 ಎಕರೆಗೂ ಹೆಚ್ಚು ಅಧಿಸೂಚಿತ ಅರಣ್ಯ ಪ್ರದೇಶದಲ್ಲಿನ ಭೂ ಮಂಜೂರಾತಿ ರದ್ದುಗೊಳಿಸುವ ಸಂಬಂಧ ಅರಣ್ಯ ಇಲಾಖೆ, ರೈತರ ನಡುವೆ ಕಾನೂನು ಸಂಘರ್ಷ ಆರಂಭವಾಗಿದೆ.













