
ಕಳಸ: (ನ್ಯೂಸ್ ಮಲ್ನಾಡ್ ವರದಿ) ಅಡಿಕೆ ಹಾಗೂ ಚಿನ್ನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಕಿರಣ್ (27), ರವಿ (50), ನಿತೇಶ್ ಯು (33) ಬಂಧಿತ ಆರೋಪಿಗಳು.
ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ; ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ; ಇಲ್ಲಿದೆ ನೋಡಿ ಸುಲಭ ಹಂತ

ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಚೀಲ ಅಡಿಕೆ ಹಾಗೂ 10 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಜಿಲ್ಲಾ ಎಸ್ಪಿ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ.ಜಿ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ ಚಿನ್ನದ ಜುಮಕಿ ಹಾಗೂ ಮಾಟಿ, ಬೆಳ್ಳಿಯ ಕಾಲುಗೆಜ್ಜೆ, 9 ಮೂಟೆ ಗೋಟು ಅಡಿಕೆ ಒಟ್ಟು 62500/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಇಂತಹವರಿಗೆ ಸಿಗಲ್ಲ ರೇಷನ್!, ಯಾಕೆ ಗೊತ್ತಾ?; ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ
ಇನ್ನು ಈ ಕಾರ್ಯಾಚಾರಣೆಯಲ್ಲಿ ಕೊಪ್ಪ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಬಾಲಾಜಿ ಸಿಂಗ್, ಆಲ್ದೂರು ಪೊಲೀಸ್ ವೃತ್ತ ನಿರೀಕ್ಷಕರು ಸೊಮೇಗೌಡ ರವರ ನೇತೃತ್ವದಲ್ಲಿ ಕಳಸ ಪೊಲೀಸ್ ಠಾಣೆಯ ಪಿ.ಎಸ್.ಐ ಬಾಬು.ಎಸ್.ಅಗೇರ, ಆದರ್ಶ ಕುಮಾರ್ ಜಿ.ಆರ್, ಸಿಬ್ಬಂಧಿಗಳಾದ ಪ್ರಮೋದ್, ಗಿರೀಶ್, ವಿಶ್ವನಾಥ್ ಪಾಳೆಗಾರ್, ಸಿದ್ದಪ್ಪ ಕರಂಡಿ, ಶಿವಕುಮಾರ್, ಸುನಿಲ್ .ವೈ, ಚಾಲಕ ಕಾಶಿನಾಥ್ ಇದ್ದರು.
ಇದನ್ನೂ ಓದಿ: ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಭರ್ಜರಿ ಅನುದಾನ; ಕೃಷಿ ಕ್ಷೇತ್ರದಲ್ಲಿ ಸಬ್ಸಿಡಿ ಸೇರಿದಂತೆ ಸಾಲದ ಮಿತಿ ಹೆಚ್ಚಳ!













