ಕರ್ನಾಟಕದಲ್ಲಿ ಮೂರು ದಶಕಗಳಿಂದಲೂ ಸಕ್ರಿಯರಾಗಿದ್ದ ನಕ್ಸಲರ ಯುಗ ಮುಗಿದಿದೆ. ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ಸರ್ಕಾರದ ಪ್ಯಾಕೇಜ್ ಒಪ್ಪಿ 6 ಮಂದಿ ನಕ್ಸಲರು ಜನವರಿ 8 ರಂದು ಮುಖ್ಯವಾಹಿನಿಗೆ ಬಂದಿದ್ದರು. ಆದರೆ, ಈ ತಂಡದಲ್ಲಿದ್ದ ಕೋಟೆಹೊಂಡ ರವೀಂದ್ರ ಮಾತ್ರ ಭೂಗತನಾಗಿಯೇ ಉಳಿದಿದ್ದ. ತದನಂತರ ಫೆ.1 ರಂದು ಕೋಟೆಹೊಂಡ ರವೀಂದ್ರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಎದುರು ಶರಣಾಗಿದ್ದ. ಬಳಿಕ ಫೆ. 2ರಂದು ಕುಂದಾಪುರ ಮೂಲದ ಲಕ್ಷ್ಮೀ ತೊಂಬಟ್ಟು ಉಡುಪಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾಗತಿಯಾಗಿದ್ದು ಇದರೊಂದಿಗೆ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ನಕ್ಸಲ್ ನಿಗ್ರಹ ಪಡೆಯ ಮುಂದಿನ ಕಾರ್ಯವೇನು?:
ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶದ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಸಲುವಾಗಿ 2005 ಮೇ 21ರಂದು ರಾಜ್ಯ ಸರ್ಕಾರದ ಆದೇಶದಂತೆ ಕಾರ್ಕಳದಲ್ಲಿ ಕೇಂದ್ರ ಸ್ಥಾನ ಸ್ಥಾಪಸಿ ರಾಜ್ಯದ ವಿವಿಧೆಡೆ 13 ಎಎನ್ಎಎಫ್ ತುಕಡಿಯನ್ನು ತೆರೆಯಲಾಗಿತ್ತು.

ಕಾರ್ಕಳ ನಗರದ ಸ್ವರಾಜ್ ಮೈದಾನ ಬಳಿ ಎಎನ್ಎಎಫ್ ಕ್ಯಾಂಪ್ ಇದ್ದು, ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಎಎನ್‌ಎಫ್‌ಗೆ ಸಿಬ್ಬಂದಿಗೆ ತರಬೇತಿ ನೀಡುತ್ತಿರುವುದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ತರಬೇತಿ ಕೇಂದ್ರದಲ್ಲಿ ಜೇಸಿಓ ಜಂಗಲ್ ಕಾಂಬೆಟ್ ಆಪರೇಷನ್ ಹೆಸರಿನಲ್ಲಿ ತರಬೇತಿ ನೀಡಿ ಬಳಿಕ ಘಟಕಗಳಿಗೆ ನಿಯೋಜನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಕಳೆದು ಅಥವಾ ಹರಿದು ಹೋದ್ರೆ ಏನು ಮಾಡ್ಬೇಕು?; ಇಲ್ಲಿದೆ ನೋಡಿ ಟಿಪ್ಸ್
ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಎನ್‌ಎಫ್ ಘಟಕಗಳಿದ್ದು, ರಾಜ್ಯದ ವಿವಿಧೆಡೆ ಒಟ್ಟು 400 ಮಂದಿ ಎಎನ್‌ಎಫ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ಬಾಗಮಂಡಲ, ಕುಟ್ರ ವಿರಾಜಪೇಟೆ, ಮೈಸೂರಿನ ಬರ್ಗಿ, ಚಿಕ್ಕಮಗಳೂರಿನ ಕಿಗ್ಗ, ದೇವಾಲಯದ ಕೆರೆಕಟ್ಟೆ, ಶಿವಮೊಗ್ಗದ ಆಗುಂಬೆ, ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಜಡ್ಡಿನಗದ್ದೆಯಲ್ಲಿ ಕ್ಯಾಂಪ್ ಇದೆ. ಕೇಂದ್ರ ಸ್ಥಾನವಾಗಿರುವ ಕಾರ್ಕಳದಲ್ಲಿ ಪ್ರಸ್ತುತ ಎಸ್‌ಪಿ, ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್, ನಾಲ್ವರು ಎಸ್‌ಐ ಸೇರಿದಂತೆ ಒಟ್ಟು 80 ಮಂದಿ ಸಿಬ್ಬಂದಿಯಿದ್ದಾರೆ.
ಸದ್ಯ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮುಕ್ತವಾಗಿದ್ದು, ಪ್ರಸ್ತುತ ಇರುವ ಎಎನ್‌ಎಫ್ ಸಿಬ್ಬಂದಿಗೆ ಸರ್ಕಾರ ಯಾವ ಜವಾಬ್ದಾರಿ ನೀಡಲಿದೆ ಎನ್ನುವುದೇ ಕುತೂಹಲ. ನಕ್ಸಲ್ ಸಿಬ್ಬಂದಿಯನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಬಾರದು ಎಂಬ ನಿಯಮವಿದ್ದು, ಸರ್ಕಾರದ ನಿಲುವು ಏನು ಎನ್ನುವುದು ಕಾದು ನೋಡಬೇಕಿದೆ.
ಇದನ್ನೂ ಓದಿ: ಸರ್ಕಾರಿ ಕಚೇರಿಗಳ ಗಮನಕ್ಕೆ; ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ













