ಎನ್. ಆರ್. ಪುರ: ಲಾಂಗ್ ಹಿಡಿದು ಕಾರಿನಲ್ಲಿ ಓಡಾಡಿದ ಯುವಕರ ಬಂಧನ

ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿದ್ದ ಇಬ್ಬರು ಯುವಕರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಬೆಟ್ಟಗೆರೆ ನಿವಾಸಿ ಸೈಯ್ಯದ್ ಸಲ್ಮಾನ್ (22) ಹಾಗೂ ಮಹಮ್ಮದ್ ಸಾಧಿಕ್ (25) ಬಂಧಿತರು.


ಇದನ್ನೂ ಓದಿ: ಯುವನಿಧಿ ಫಲಾನುಭವಿಗಳ ಗಮನಕ್ಕೆ; ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ


ಶುಕ್ರವಾರ ಶೆಟ್ಟಿಕೊಪ್ಪ ಕಡೆಯಿಂದ ಕಾರಿನಲ್ಲಿ ಇಬ್ಬರು ಯುವಕರು ಲಾಂಗ್ ಇಟ್ಟುಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಸೌತಿಕೆರೆ ಸಮೀಪ ವಾಹನ ಪರಿಶೀಲನೆ ನಡೆಸಿದಾಗ ಇಬ್ಬರು ಆರೋಪಿಗಳು ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ.


ಇದನ್ನೂ ಓದಿ: ಈ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ; ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ವಿಚಾರಿಸಿದಾಗ ನಮ್ಮನ್ನು ನೋಡಿ ಜನರು ಹೆದರಿಕೊಳ್ಳಲಿ ಎಂದು ಲಾಂಗ್ ತೋರಿಸಿಕೊಂಡು ಓಡಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಲಾಂಗ್ ಹಿಡಿದಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಅಪ್ ಲೋಡ್ ಮಾಡಿರುವುದು ತಿಳಿದುಬಂದಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರೇಕ್ಷಣೀಯ ಸ್ಥಳದಲ್ಲಿ ಯುವಕರ ಎಣ್ಣೆ ಪಾರ್ಟಿ: ಪ್ರವಾಸಿಗರಿಂದ ಆಕ್ರೋಶ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಸೂರಮನೆ ಫಾಲ್ಸ್ ಬಳಿ ಪ್ರವಾಸಕ್ಕೆ ಬಂದಿದ್ದ ಎಣ್ಣೆ ಪಾರ್ಟಿ ಗುಂಪೊಂದು ಫಾಲ್ಸ್ ಸಮೀಪದಲ್ಲೇ ಮಧ್ಯ ಸೇವನೆ ಮಾಡಿದ್ದು, ಅವರ ವರ್ತನೆ ಕಂಡು ಫ್ಯಾಮಿಲಿ ಸಮೇತ ಬಂದಿದ್ದ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ: ಏರಿಕೆಯ ಹಾದಿಯಲ್ಲಿ ಅಡಿಕೆ ರೇಟ್; ಇಲ್ಲಿದೆ ನೋಡಿ ಇವತ್ತಿನ ರೇಟ್


ಕಳಸ ತಾಲೂಕಿನ ಸೂರಮನೆ ಜಲಪಾತದ ಪಕ್ಕದಲ್ಲೇ ಪ್ರವಾಸಿಗರ ಗುಂಪೊಂದು ಮದ್ಯ ಸೇವನೆ ಮಾಡಿದ್ದು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿದ್ದರೆ, ಅಂಥವರಿಗೆ ಇವರಿಂದ ಕಿರಿ ಕಿರಿಯಾದರೆ ಕೇಳುವವರಿಲ್ಲ ಎಂದು ಕಿಡಿ ಕಾರಿದ್ದಾರೆ.


ಇದನ್ನೂ ಓದಿ: ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್


ರಜಾ ದಿನಗಳಲ್ಲಿ ಕಳಸ-ಹೊರನಾಡು ಭಾಗಕ್ಕೆ ಬರುವ ಬಹುತೇಕ ಪ್ರವಾಸಿಗರು ಸೂರಮನೆ ಫಾಲ್ಸ್ ಗೆ ಭೇಟಿ ನೀಡುತ್ತಾರೆ, ಪ್ರವಾಸಿಗರ ಹಿತದೃಷ್ಟಿಯಿಂದ ಜಲಪಾತದ ಬಳಿ ಪೊಲೀಸರನ್ನ ನೇಮಕ ಮಾಡುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.