
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆಗಳು ನಾಡಿಗೆ ಬಾರದಂತೆ ಸರ್ಕಾರವು ಶಾಶ್ವತ ಪರಿಹಾರ ಮಾಡಬೇಕು ಎಂದು ಗದ್ದೆಮನೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗದ್ದೆಮನೆ ವಿಶ್ವನಾಥ್ ಸಲಹೆ ನೀಡಿದರು.
ಇದನ್ನೂ ಓದಿ: ಪಂಚಾಯಿತಿಯಲ್ಲೇ ಸಿಗಲಿವೆ ಜನನ-ಮರಣ ಪ್ರಮಾಣ ಪತ್ರ

ಅವರು ಮಂಗಳವಾರ ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಉಮೇಶ್ ಅವರ ಮನೆಗೆ ತೆರಳಿ ಅವರ ಪತ್ನಿ ಪ್ರೇಮ ಅವರಿಗೆ 1 ಲಕ್ಷ ರೂಪಾಯಿ ಚೆಕ್ ವಿತರಿಸಿ ಮಾತನಾಡಿ, ಕಾಡಾನೆಗಳು ನಾಡಿಗೆ ಬಾರದಂತೆ ರೇಲ್ವೆ ಬ್ಯಾರಿಕೇಡ್ ಮಾಡುವುದು ಸೂಕ್ತವಾಗಿದೆ. ಈ ಬಗ್ಗೆ ಬಗ್ಗೆ ಸರ್ಕಾರವು ಹೆಚ್ಚು ಗಮನ ನೀಡಬೇಕು. ಕಾಡಿನಲ್ಲಿ ಆನೆಗಳಿಗೆ ಸೂಕ್ತ ನೀರು ಇಲ್ಲದಿರುವುದು, ಆಹಾರಕ್ಕಾಗಿ ಹಣ್ಣಿನ ಗಿಡ ಗಿಡ ಇಲ್ಲದೆ ಇರುವುದರಿಂದ ಕಾಡಾನೆಗಳು ಆಹಾರ ಹುಡುಕಿ ನಾಡಿಗೆ ಬರುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ 4 ಜನ ಮೃತಪಟ್ಟಿದ್ದು ಮುಂದೆ ಈ ರೀತಿ ಆಗಬಾರದು. ಸರ್ಕಾರವು ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ತಲಾ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ. ಎನ್. ನಾಗೇಶ್ ಮಾತನಾಡಿ, ದಾನಿ ವಿಶ್ವನಾಥ್ ಅವರು ಈಗಾಗಲೇ ಶೃಂಗೇರಿ ಕ್ಷೇತ್ರದಾದ್ಯಂತ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ನೀಡುತ್ತಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ನಾಲ್ಕು ಕುಟುಂಭದವರ ಮನೆಗೆ ತೆರಳಿ ತಲಾ 1 ಲಕ್ಷ ನೀಡುತ್ತಿರುವುದಕ್ಕೆ ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯಿಂದ ಅಭಿನಂದಿಸುತ್ತೇವೆ. ಕುಟುಂಬದಲ್ಲಿ ದುಡಿಯುವುವರೇ ಆನೆ ಮೃತಪಟ್ಟಿದ್ದಾರೆ. ಮುಂದೆ ಹೀಗಾಗದಂತೆ ಸರ್ಕಾರವು ಎಚ್ಚರಿಕೆ ವಹಿಸಬೇಕು ಎಂದರು.
ಇದನ್ನೂ ಓದಿ: ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆಗೆ ಅನುಮತಿ
ಈ ಸಂದರ್ಭದಲ್ಲಿ ಸೀತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಉಪೇಂದ್ರ, ಎಚ್.ಇ.ದಿವಾಕರ, ಮುಖಂಡರಾದ ಮೂಡ್ಲಿ ಶ್ರೀಧರ್, ಎನ್.ಪಿ.ರವಿ, ಚರಣ ಹೆಬ್ಬಾರ,ಕೆರೆಗದ್ದೆ ಚೇತನ್, ರೈತ ಹಿತ ರಕ್ಷಣಾ ಸಮಿತಿಯ ಮುಖಂಡರಾದ ಗದ್ದೆಮನೆ ಸತೀಶ್, ಹೊಸಹಳ್ಳಿ ಅಭಿಷೇಕ್, ಪುರುಶೋತ್ತಮ್, ಗದ್ದೆಮನೆ ಗಿರೀಶ್, ಹಂಚಿನಮನೆ ರಾಘವೇಂದ್ರ, ಸಚಿನ್ ಕುಡ್ನಳ್ಳಿ, ನಿಲುವಾನಿ ಪ್ರದೀಪ್, ಅಶೋಕ್ ಮತ್ತಿತರರು ಇದ್ದರು. ನಂತರ ಎಕ್ಕಡಬೈಲು, ಬನ್ನೂರು ಗ್ರಾಮದ ಅಂಡುವಾನಿಗೆ ತೆರಳಿ ಕಾಡಾನೆ ದಾಳಿಯಿಂದ ಮತಪಟ್ಟವರಿಗೆ 1 ಲಕ್ಷ ಚೆಕ್ ವಿತರಿಸಿದರು. ನಂತರ ಖಾಂಡ್ಯ ಗ್ರಾಮಕ್ಕೆ ತೆರಳಿ ಕಾಡು ಕೋಣ ದಾಳಿಯಿಂದ ಗಾಯಗೊಂಡ ಕುಟುಂಬದವರಿಗೆ 1 ಲಕ್ಷ ರೂಪಾಯಿ ಚೆಕ್ ವಿತರಿಸಿದರು.
ಇದನ್ನೂ ಓದಿ: ಗ್ರಾಪಂ ಸಿಬ್ಬಂದಿಗಳಿಗೆ ವೇತನ ಪಾವತಿ: ಮಹತ್ವದ ಆದೇಶ













