ಮೂಡಿಗೆರೆ: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ, ಓರ್ವ ಸಾವು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ‍್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಒಕ್ಕಳ್ಳಿ ಬಳಿ ನಡೆದಿದೆ. ಸತೀಶ್ (28) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ.


ಇದನ್ನೂ ಓದಿ: ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು


50 ಚೀಲಕ್ಕೂ ಹೆಚ್ಚು ಗೊಬ್ಬರ ತುಂಬಿಕೊಂಡು ಬಣಕಲ್ ನಿಂದ ಸಾರಗೋಡು ಗ್ರಾಮಕ್ಕೆ ಹೋಗುತ್ತಿದ್ದ ಟ್ರ‍್ಯಾಕ್ಟರ್, ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಟ್ರ‍್ಯಾಕ್ಟರ್ ಸಂಪೂರ್ಣ ಉಲ್ಟಾವಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಟ್ರ‍್ಯಾಕ್ಟರ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಇದನ್ನೂ ಓದಿ: hsrp ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ


ಈ ಸಂಬಂಧ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಉದ್ಯೋಗ; 40,000ಕ್ಕೂ ಅಧಿಕ ಹುದ್ದೆಗೆ ನೇಮಕಾತಿ; 10th ಪಾಸಾದವರು ಅರ್ಜಿ ಸಲ್ಲಿಸಿ


ಹರಿಹರಪುರ/ಶೃಂಗೇರಿ: ಕಾಂತಾರ ಪಾರ್ಟ್-2 ಸಿನಿಮಾ ಶೂಟಿಂಗ್ ನಡುವೆ ರಿಷಬ್ ಶೆಟ್ಟಿ ಟೆಂಪಲ್ ರನ್

ಹರಿಹರಪುರ/ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಖ್ಯಾತ ಚಲನಚಿತ್ರ ನಟ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪಾರ್ಟ್-2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಇದೀಗ ಶೂಟಿಂಗ್ ಗೆ ಕೊಂಚ ಬ್ರೇಕ್ ಹಾಕಿ ದೇಗುಲ ಯಾತ್ರೆ ಕೈಗೊಂಡಿದ್ದಾರೆ. ಹೌದು, ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ, ತಾಯಿ ಹಾಗೂ ಮಕ್ಕಳ ಸಮೇತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಿವ್ಯಕ್ಷೇತ್ರ ಹರಿಹರಪುರ ಹಾಗೂ ಶೃಂಗೇರಿ ಶಾರದಾಂಬೆಯ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.

ಹರಿಹರಪುರ ಶ್ರೀಗಳ ಆಶೀರ್ವಾದ ಪಡೆದ ನಟ ರಿಷಬ್ ಶೆಟ್ಟಿ:
ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಶಾರದಾ ಲಕ್ಷ್ಮಿನರಸಿಂಹಸ್ವಾಮಿಯ ದರ್ಶನ ಪಡೆದು ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಮಠದ ಆವರಣದ ಅಂಜನೇಯನ ಬಳಿ ರಿಷಭ್ ಜೊತೆ ಫೋಟೋಗಾಗಿ ಅಭಿಮಾನಿಗಳು ಮುಗಿ ಬಿದ್ದು ಫೋಟೋ ತೆಗೆದುಕೊಂಡಿದ್ದಾರೆ

ಶೃಂಗೇರಿಯಲ್ಲಿ ಅಕ್ಷರ ಅಭ್ಯಾಸ:
ನಂತರ ಶೃಂಗೇರಿ ಶಾರದಾಂಬೆಯ ಸನ್ನಿಧಾನದಲ್ಲಿ ರಿಷಭ್ ಶೆಟ್ಟಿ ಅವರ 2ನೇ ಮಗು ರಾಧ್ಯಾಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿದ್ದಾರೆ. ಈ ಕುರಿತು ಸ್ವತಃ ರಿಷಭ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ “ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ನಮ್ಮ ಪುಟ್ಟ ರಾಧ್ಯಳ ಅಕ್ಷರ ಅಭ್ಯಾಸದ ಕ್ಷಣ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್ ಹಂಚಿಕೊಂಡ ಬಗ್ಗೆ ಅಭಿಮಾನಿಗಳು ಜಗನ್ಮಾತೆ ಶಾರದಾಂಬೆ ಅನುಗ್ರಹ ನಿಮ್ಮ ಕುಟುಂಬದ ಮೇಲಿರಲಿ ಎಂದು ಹಾರೈಸಿದ್ದಾರೆ.

ರಿಷಬ್ ಶೆಟ್ಟಿಗೆ ಡಿವೈನ್ ಸ್ಟಾರ್ ಎಂದು ಕರೆಯಲು ಕಾರಣವೇನು?;
ಕನ್ನಡದಲ್ಲಿ ತೆರೆಕಂಡು ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದ ಅನೇಕ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗಿತ್ತು. ಕರ್ನಾಟಕದಿಂದ ಆರಂಭ ಆಗಿದ್ದ ಕಾಂತಾರ ಆರ್ಭಟ ದೇಶದ ಉದ್ದಗಲಕ್ಕೂ ಹಬ್ಬಿತ್ತು. ದೇಶಮಾತ್ರವಲ್ಲದೇ ವಿದೇಶದಲ್ಲೂ ಚಿತ್ರಕ್ಕೆ ಬಹಳ ಜನಪ್ರಿಯತೆ ಸಿಕ್ಕಿತ್ತು. ಇತರ ಭಾಷೆಯ ಸೆಲೆಬ್ರೆಟಿಗಳೂ ಕೂಡ ಈ ಚಿತ್ರವನ್ನು ಮೆಚ್ಚಿ ಕೊಂಡಿದ್ದರು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕಾಂತಾರ ಹಿಟ್ ಆದ ಬೆನ್ನಲ್ಲೆ ರಿಷಬ್ ಶೆಟ್ಟಿಗೆ ಫ್ಯಾನ್ಸ್ ಗಳಿಂದ ಡಿವೈನ್ ಸ್ಟಾರ್ ಎಂಬ ಸ್ಟಾರ್‌ಗಿರಿ ಪಟ್ಟ ಸಿಕ್ಕಿದೆ.

ದೇವಸ್ಥಾನ ಹಾಗೂ ದೇವರ ಬಗ್ಗೆ ನಂಬಿಕೆ ಹೇಗೆ ರಿಷಬ್ ಶೆಟ್ಟಿಗೆ:
ಕಾಂತಾರ ಸಿನಿಮಾ ನಂತರ ಕೆಲ ಮಾಧ್ಯಮಗಳಲ್ಲಿ ಸ್ವತಃ ರಿಷಬ್ ಶೆಟ್ಟಿಯೇ ದೇವಸ್ಥಾನ ಹಾಗೂ ದೇವರ ನಂಬಿಕೆಯ ಬಗ್ಗೆ ಹೇಳಿಕೊಂಡಿದ್ದಾರೆ. ದೈವ-ದೇವರು-ದೇವಿ ಇವೆಲ್ಲ ನಮ್ಮಲ್ಲಿ ಒಂದು ವೈಬ್ರೇಷನ್ ಕ್ರಿಯೇಟ್ ಮಾಡುತ್ತವೆ. ದೇವರು-ದೇವಿ-ದೈವ ಎಲ್ಲೆಡೆ ಇರುತ್ತವೆ. ನಂಬಿಕೆಗಳೂ ಅಷ್ಟೇ ಅಪಾರವಾಗಿಯೇ ಇರುತ್ತವೆ. ಈಗೀನ ಬೆಳವಣಿಗೇನೆ ಕಾರಣ ಅಂತ ಹೇಳಬಹುದು ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.