ಮೂಡಿಗೆರೆ: ಆಟೋ ರಿಕ್ಷಾದಲ್ಲಿ ಗಾಂಜಾ : ಇಬ್ಬರು ಆರೋಪಿ ಅರೆಸ್ಟ್

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಆಟೋ ರಿಕ್ಷಾದಲ್ಲಿ ಗಾಂಜಾ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನ ಬಾಸನ ಕುಡಿಗೆಯಲ್ಲಿ ನಡೆದಿದೆ. ಶಿವಮೊಗ್ಗದ ಮೊಹಮ್ಮದ್ ಪರ್ವೀಜ್ (40) ಹಾಗೂ ಶ್ರೀನಿವಾಸ (30) ಬಂಧಿತ ಆರೋಪಿಗಳು.


ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಬಾಳೂರಿನ ಬಾಸನ ಕುಡಿಗೆಯ ರಸ್ತೆ ಬಳಿ ಆಟೋ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಗಸ್ತು ತಿರುಗುತಿದ್ದ ಬಾಳೂರು ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಹಾಗೂ ಪೊಲೀಸರು ಅನುಮಾನಗೊಂಡು ಆಟೋರಿಕ್ಷಾ ತಪಾಸಣೆ ಮಾಡಿದಾಗ 195 ಗ್ರಾಂ ತೂಕದ ಗಾಂಜಾ ಸೊಪ್ಪು, ಸುತ್ತಲೂ ಬಳಸುವ ಟಿಪ್ಸ್, ಗಾಂಜಾ ಬಳಸುವ ಚಿಮಣಿ ಪತ್ತೆಯಾಗಿದೆ.


ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಕೂಡಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಂದ ಗಾಂಜಾ ಸೊಪ್ಪು, ಸುತ್ತಲೂ ಬಳಸುವ ಟಿಪ್ಸ್, ಗಾಂಜಾ ಬಳಸುವ ಚಿಮಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.