ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಗೆ ಉದಾಹರಣೆಗೆ ಎಂಬಂತೆ ಪೊಲೀಸಪ್ಪನೇ ಇಸ್ಪಿಟ್ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ; ಕೊಪ್ಪ: 14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಡೆತ್ ನೋಟ್ ನಲ್ಲಿ ಸಿಕ್ತು ಆಘಾತಕಾರಿ ಅಂಶ

ಮೂಡಿಗೆರೆ ತಾಲ್ಲೂಕಿನ ಎಸ್ಟೇಟ್ ಒಂದರಲ್ಲಿ ಇಸ್ಲೀಟ್ ದಂಧೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಜಿಲ್ಲೆಯ ಸೆನ್ ಪೊಲೀಸರಿಗೆ ಬಂದಿತ್ತು.. ಮಾಹಿತಿ ಪಡೆದ ಪೊಲೀಸರು ಕೂಡಲೇ ಮೂಡಿಗೆರೆ ತಾಲ್ಲೂಕಿನ ಕಾಡುಮಲ್ಲಿಗೆ ಎಸ್ಟೇಟ್ ಮೇಲೆ ದಾಳಿ ನಡೆಸಿದ್ದರು. ದಾಳಿ ಮಾಡಿದಾಗ ಸಿಕ್ಕಿ ಹಾಕಿಕೊಂಡಿದ್ದು ಯಾವುದೋ ಪುಂಡ ಪೋಕರಿಗಳಲ್ಲ.. ಬದಲಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದ್ದ, ಸಾರ್ವಜನಿಕರಿಗೆ ನೀತಿ ಪಾಠ ಹೇಳಬೇಕಾಗಿದ್ದ ‘ಪೋಲಿ’ಸಪ್ಪ.

ಇದನ್ನೂ ಓದಿ; ಕಳ್ಳಸಾಗಣೆ ಮಾಡುತ್ತಿದ್ದ 4.8 ಕೋಟಿ ಮೌಲ್ಯ ಅಡಿಕೆ ವಶ
ಇಸ್ಪೀಟ್ ದಂಧೆಯಲ್ಲಿ ಸಿಕ್ಕಿಬಿದ್ದ ಹೆಡ್ ಕಾನ್ಸ್ಟೇಬಲ್
ಇಸ್ಪೀಟ್ ದಂಧೆ ಕುರಿತಂತೆ ಖಚಿತ ಮಾಹಿತಿ ಪಡೆದ ಜಿಲ್ಲಾ ಸೆನ್ ಠಾಣೆಯ ಪೊಲೀಸರು ಮೊನ್ನೆ ತಡರಾತ್ರಿ (ಆ. 27) ಮೂಡಿಗೆರೆಯ ಕಾಡುಮಲ್ಲಿಗೆ ಎಸ್ಟೇಟ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬಣಕಲ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಕೂಡ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದ ಸೆನ್ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ ಅಂತಿಮ ಪಟ್ಟಿ ಬಿಡುಗಡೆ; ಈ ಲಿಸ್ಟ್ ನಲ್ಲಿ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ
ದಂಧೆಯಲ್ಲಿ ಭಾಗಿಯಾಗಿದ್ದ ಪೊಲೀಸಪ್ಪ ಅಮಾನತು
ಇನ್ನು ಇಸ್ಪೀಟ್ ದಂಧೆಯಲ್ಲಿ ಪಾಲ್ಗೊಂಡಿದ್ದ ಬಣಕಲ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ನನ್ನು ಚಿಕ್ಕಮಗಳೂರು ಜಿಲ್ಲಾ ನೂತನ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಅಮಟೆ (ಐಪಿಎಸ್) ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಇಸ್ಪೀಟ್ ನಂತ ದಂಧೆಯಲ್ಲಿ ಸಿಕ್ಕಿಬಿದ್ದಿರುವುದು ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಚಂದ್ರಶೇಖರ್ ಸೇರಿಂದಂತೆ ಒಟ್ಟು 13 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ; ಜಲಪಾತ ಸಿನಿಮಾದಲ್ಲಿ ಅಭಿನಯಿಸಿರುವ ಪ್ರಮೋದ್ ಅವರ ಲುಕ್ ರಿವಿಲ್; ಪೋಸ್ಟರ್ ನೋಡಿ ಫೀದಾ ಆದ ಪ್ರಮೋದ್ ಧರ್ಮಪತ್ನಿ
ಇಸ್ಟೀಟ್ ಆಡುತ್ತಿದ್ದವರ ಬಂಧನ:
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಕಂಚಿಕಲ್ ದುರ್ಗ ಗ್ರಾಮದಲ್ಲಿ ಇಸ್ಟೀಟ್ ಆಡುತ್ತಿದ್ದವರನ್ನ ಬಂಧಿಸಲಾಗಿದೆ. ಸೆನ್ ಠಾಣೆ ಇನ್ಸ್ ಪೆಕ್ಟರ್ ಗವಿರಾಜ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಸುಧೀನ್ ಕುಮಾರ್, ಮಹ್ಮದ್ ಜಬಿವುಲ್ಲಾ, ತಿಮ್ಮ, ಉಮೇಶ್, ಶಿವರೂಪ, ರಘು ವೈ.ಬಿ, ರಾಜೇಶ್, ಶಂಕರ, ಪ್ರಮೋದ ಪಿ.ಎಸ್, ಸತೀಶ್, ತೇಜ ಸಿ.ಆರ್, ಚಂದ್ರಶೇಖರ್, ಮಧು ಆರ್ ಗೌಡ, .ವೆಂಕಟೇಶ್ ಮಾಕೋನಹಳ್ಳಿ, ಶ್ರೀನಾಥ್ ಕಣತಿ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಬರೋಬ್ಬರಿ ನಗದು ವಶಕ್ಕೆ:
ಬಂಧಿತ ಆರೋಪಿಗಳಿಂದ 1,53,470 ರೂ ನಗದು, ಮೂರು ಕಾರು ಮತ್ತು 10 ಮೊಬೈಲ್ ಪೋನ್ ಗಳನ್ನ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಐ ಗವಿರಾಜ್ ಆರ್ ಪಿ, ಪಿಎಸ್ ಐ ರಘುನಾಥ್ ಹಾಗೂ ಸಿಬ್ಬಂದಿಗಳಾದ ಶಶಿಧರ್ ಜಿ.ಕೆ, ರಾಜು ಡಿ.ಎಸ್, ಅನ್ವರ್ ಪಾಷಾ, ರಮೇಶ್ ಎನ್.ಆರ್, ಹರೀಶ್ ಟಿ.ಕೆ, ಧರ್ಮರಾಜ್, ಬಷೀರ್ ಅಹ್ಮದ್ ಕಾರ್ಯಾಚರಣೆಯಲ್ಲಿ ಇದ್ದರು.













