ಕೊಗ್ರೆ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಆರ್. ಪ್ರಕಾಶ್ ಕುಮಾರ್ ಅವರಿಗೆ ಯಕ್ಷಮಿತ್ರಕೂಟದಿಂದ ಸನ್ಮಾನ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ದುರ್ಗಾಪರಮೇಶ್ವರಿ ಯಕ್ಷ ಮಿತ್ರಕೂಟ ಕೊಗ್ರೆ ಇವರ ಮೂರನೇ ವರ್ಷದ ಯಕ್ಷ ಪಯಣದ ಪ್ರಯುಕ್ತ “ಪಂಜರ ಪಕ್ಷಿ” ಪ್ರೋ ಪವನ್ ಕಿರಣಕೆರೆ ವಿರಚಿತ ಕಾಲ್ಪನಿಕ ಕಥಾನಕವನ್ನು ಕೊಗ್ರೆಯ ಗಣಪತಿ ಸಭಾಭವನದಲ್ಲಿ ಆಡಿ ತೋರಿಸಲಾಯಿತು.


ನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!


ಈ ವೇಳೆ ಕೊಗ್ರೆ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಕಲಾ ಪೋಷಕರಾದ ಕೆ ಆರ್ ಪ್ರಕಾಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ ಆರ್ ಪ್ರಕಾಶ್ ಕುಮಾರ್ ಅವರು, ಹತ್ತೂರಿನ ಸನ್ಮಾನಕ್ಕಿಂತ ಹೆತ್ತೂರಿನ ಸನ್ಮಾನ ಬಹಳ ವಿಶೇಷ, ಸನ್ಮಾನಿಸಿದ ಕ್ಷಣ ಭಾವುಕನಾದೆ ಎಂದರು. ನಾನು ಬಾಲ್ಯದಿಂದಲೂ ತಾಯಿಯ ಭಕ್ತ. ಈಗ ದುರ್ಗಾಪರಮೇಶ್ವರಿ ತಾಯಿಯ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಈ ಗೌರವ ನನಗಷ್ಟೇ ಅಲ್ಲ ದೇವಸ್ಥಾನದ ಭಕ್ತರಿಗೂ ಸಲ್ಲುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದಾನಿಗಳಿಂದ ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಿದೆ ಮುಂದೆಯೂ ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.


ನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್‌!


ಈ ಸಂಧರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷ ಮಿತ್ರಕೂಟ ಸಮಿತಿಯ ಶಿವ ಶಂಕರ್ ಸೌತೆಕುಣಿ, ವರ್ಧಮಾನ್ ಜೈನ್, ಕೃಷ್ಣಪೂಜಾರಿ, ಶಾಂತಪ್ಪ, ಕೃಷ್ಣ ಇದ್ದರು. (ವರದಿ: ಶಶಿ ಬೆತ್ತದಕೊಳಲು)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.