
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಮದುವೆ ಹಿಂದಿನ ದಿನ ಅಪಘಾತದಲ್ಲಿ ಮೃತಪಟ್ಟ ತಂದೆಯ ಸಾವಿನ ವಿಷಯ ಗೋಪ್ಯವಾಗಿಟ್ಟು ಮಗಳ ಮದುವೆ ಕಾರ್ಯವನ್ನು ಸಂಬಂಧಿಕರು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: 2 PUC ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ

ತರೀಕೆರೆ ಪಟ್ಟಣದ ನಾಗಪ್ಪ ಕಾಲೊನಿಯ ನಿವಾಸಿ ಗೋಣಿಚೀಲದ ವ್ಯಾಪಾರಿ ಪಾಪಣ್ಣ ಅವರ ಮಗ ಚಂದ್ರು(45) ಮೃತಪಟ್ಟವರು.

ಚಂದ್ರು ಅವರ ಪುತ್ರಿ ದೀಕ್ಷಾ ಅವರ ವಿವಾಹ ಬೀರೂರಿನ ಪತ್ರೆ ಕಲ್ಯಾಣ ಮಂಟಪದಲ್ಲಿ ಭಾನುವಾರ ಮತ್ತು ಸೋಮವಾರ ನಿಗದಿಯಾಗಿತ್ತು. ಲಿಂಗದಹಳ್ಳಿ ಸಮೀಪದ ಹುಲಿತಿಮ್ಮಾಪುರ ಗ್ರಾಮದಲ್ಲಿ ಸಂಬಂಧಿಕರಿಗೆ ಶನಿವಾರವೇ ಆಹ್ವಾನ ಪತ್ರಿಕೆ ನೀಡಿದ್ದರು. ಮರೆತಿದ್ದ ಒಬ್ಬರಿಗೆ ಆಹ್ವಾನ ನೀಡಲು ಭಾನುವಾರ ಬೆಳಿಗ್ಗೆಯೇ ಚಂದ್ರು ಬೈಕ್ ನಲ್ಲಿ ಮತ್ತೆ ಹೋಗಿದ್ದರು. ವಾಪಸ್ ಬರುವಾಗ ಬೆಳಿಗ್ಗೆ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಸ್ಥಳೀಯರು ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಭಾನುವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟರು.
ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್ ಮಾಡಿ…
ತಂದೆ ಮೃತಪಟ್ಟಿರುವ ವಿಷಯ ತಿಳಿಸಿದರೆ ಮಗಳ ಮದುವೆ ನಿಲ್ಲಲಿದೆ ಎಂಬ ಕಾರಣಕ್ಕೆ ಸಂಬಂಧಿಕರು ವಿಷಯ ಮುಚ್ಚಿಟ್ಟು ಸೋಮವಾರ ಬೆಳಿಗ್ಗೆ ಮದುವೆ ಕಾರ್ಯಗಳನ್ನು ಪೂರ್ಣಗೊಳಿಸಿದರು. ಮುಹೂರ್ತ ಮುಗಿದ ಬಳಿಕ ಸಾವಿನ ವಿಷಯ ತಿಳಿಸಿದ್ದಾರೆ. ಚಂದ್ರು ಮೃತದೇಹದ ಅಂತ್ಯಕ್ರಿಯೆ ಸೋಮವಾರ ಸಂಜೆ ನೆರವೇರಿತು.
ಇದನ್ನೂ ಓದಿ: ಜೀವವಿಲ್ಲದ ದೇಹಗಳೊಂದಿಗೆ ಅಘೋರಿಗಳ ಜೀವನ…!; ಅಘೋರಿಗಳ ವಿಚಿತ್ರ ಜೀವನ ಶೈಲಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!













