
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯಿತಿಯ ಹೊಸಳ್ಳಿ ಬಳಿ ನಡೆದಿದೆ. ಅಗಸರಕೋಣೆ ಶರತ್ (35) ಮತ್ತು ಪಿಕಪ್ ವಾಹನದಲ್ಲಿದ್ದ ಕೇರಳ ಮೂಲದ ಮತ್ತೋರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಿದರಗೋಡು ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಗೆ ಏಕಾಏಕಿ ಪಿಕಪ್ ವಾಹನ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಪಿಕಪ್ ವಾಹನ ವೇಗವಾಗಿ ಇದ್ದ ಕಾರಣ ವಾಹನದಲ್ಲಿದ್ದ ಕೇರಳ ಮೂಲದ ಯುವಕ ಗುಂಡಿಗೆ ಬಿದ್ದು ಮೃತಪಟ್ಟಿದ್ದು, ಇನ್ನೊರ್ವ ಗಂಭೀರ ಗಾಯಗೊಂಡಿದ್ದಾನೆ. ಪಿಕಪ್ ವಾಹನ ಚಾಲಕ ಬಾವಿ ಕೆಲಸ ಮಾಡುವ ಸಂತೋಷ್ ಎಂಬಾತ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಈರುಳ್ಳಿ ಮೇಲೆ ಕಪ್ಪು ಬಣ್ಣ ಇದ್ದರೆ ತಿನ್ನಬೇಕಾ ಬೇಡ್ವಾ..?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಜಮೀನಿನ ದಾರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!; ಏನದು? ಇಲ್ಲಿದೆ ನೋಡಿ












