ಚಿಕ್ಕಮಗಳೂರು: ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿ | ಪುಂಡರಿಗೆ ಬಿತ್ತು ದಂಡ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೋಟಾರ್ ಸೈಕಲ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗೇರ್ ಮರಡಿ ರಸ್ತೆಯಲ್ಲಿ ನಡೆದಿದೆ.

 

ಇದನ್ನೂ ಓದಿ; ಪೊಲೀಸರ ಮಿಂಚಿನ ಕಾರ್ಯಾಚರಣೆ; ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ

ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದ ಸುಮಾರು 22 ವರ್ಷ ವಯಸ್ಸಿನ ಯುವಕನ ವಿರುದ್ಧ ಕಲಂ 189 ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘನ ನ್ಯಾಯಾಲಯವು 5,000 ರೂಗಳನ್ನು ದಂಡ ವಿಧಿಸಿದ್ದಾರೆ.

 

ಇದನ್ನೂ ಓದಿ; ಚೈತ್ರಾ ಕುಂದಾಪುರ ಬಂಧನವಾಗುತ್ತಿದಂತೆ 3 ನೇ ಆರೋಪಿ ನಾಪತ್ತೆ

ಹಲವು ಕಡೆ ವೈಕ್ ವ್ಹೀಲಿಂಗ್ ಹುಚ್ಚಾಟ ನಡೆಯುತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಯುವಕರ ಮೊಜು ಮೊಸ್ತಿ ಆಟವಾಗಿರಬೇಕು. ಆದರೆ ಅದು ಹುಚ್ಚಾಟವಾದರೆ ಜೀವಗಳಿಗೆ ಕುತ್ತು ತರುತ್ತದೆ ಅನ್ನೊದಕ್ಕೆ ಈ ಹಿಂದೆ ವಿವಿದ ಕಡೆ ವ್ಹೀಲಿಂಗ್ ವೇಳೆ ನಡೆದ ಕೃತ್ಯಗಳೇ ನೈಜ ಉದಾಹರಣೆ. ಅಷ್ಟೆ ಅಲ್ಲದೇ ಸೋಶಿಯಲ್ ಮೀಡಿಯದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಮೇಲೆ ಸಹ ನಿಗಾ ವಹಿಸಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸಹ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

 

ಚಿಕ್ಕಮಗಳೂರು: ಭೀಕರ ಸರಣಿ ಅಪಘಾತ | ದಂಪತಿ ಸ್ಥಳದಲ್ಲೇ ಮೃತ್ಯು, ಮಗು ಗಂಭೀರ

ಇದನ್ನೂ ಓದಿ; ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚಿಸಿದ ಚೈತ್ರಾ ಗ್ಯಾಂಗ್ ನ ಮೋಸದ ರೋಚಕ ಸ್ಟೋರಿ ಸಿನಿಮಾ ಸ್ಟೋರಿಯನ್ನೂ ಮೀರಿಸುತ್ತದೆ.

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಡರಾತ್ರಿ ಕಾರು, ಟಿಪ್ಪರ್ ಲಾರಿ, ಬೈಕ್ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ನಡೆದಿದೆ

 

ಶಿವಮೊಗ್ಗ ಮೂಲದ ಸಯ್ಯದ್ ಆಸೀಫ್ (38), ಮಾಜಿನಾ (33) ಅಪಘಾತದಲ್ಲಿ ಸಾವನ್ನಪ್ಪಿದ ದಂಪತಿ. ಇನ್ನು ಈ ದಂಪತಿಯ 1 ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ.
ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿರುವಾಗ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.