ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಮತ್ತಿನಲ್ಲಿ ಗನ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆರೋಪಿಯಿಂದ ಗನ್ ಹಾಗೂ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಬೀರೂರು ಮೂಲದ ಸಮೀರ್ ಬಂಧಿತ ಆರೋಪಿಯಾಗಿದ್ದಾನೆ.
ಇದನ್ನೂ ಓದಿ; ಕರ್ನಾಟಕ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ; ಅರ್ಜಿ ಸಲ್ಲಿಸುವುದು ಹೇಗೆ?; ಅರಣ್ಯ ವೀಕ್ಷಕರ ಹುದ್ದೆಗೆ ವೇತನ ಎಷ್ಟು?

ಬಂಧಿತ ಆರೋಪಿಯಿಂದ ಒಂದು ಲೋಡೆಡ್ ಗನ್, ಹತ್ತು ಸಜೀವ ಗುಂಡುಗಳು, ಎರಡು ಚಾಕು, ಒಂದು ಡ್ರಾಗರ್, 40 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ವ್ಯಸನಿಯಾಗಿದ್ದ ಸಮೀರ್, ಭಾನುವಾರ ರಾತ್ರಿ ವೇಳೆ ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಗನ್ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುತ್ತಿದ್ದ. ಅಲ್ಲದೆ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.

ಇದನ್ನೂ ಓದಿ; ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಈ ದಿನಾಂಕದಿಂದ ಶರನ್ನವರಾತ್ರಿ ಆರಂಭ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಸಮೀರ್ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ವೃತ್ತಿ ಮಾಡುತ್ತಿದ್ದ ಎನ್ನಲಾಗುತ್ತಿದ್ದು, ಅಕ್ರಮವಾಗಿ ಗನ್ ಖರೀದಿಸಿ ತನ್ನಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.
ಕೊಪ್ಪ: ಸುಧಾಕರ್ ಎಸ್ ಶೆಟ್ಟಿ ಅವರನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮುಂದಿನ ಲೋಕಸಭಾ ಚುನಾವಣೆಗೆ ಸುಧಾಕರ್ ಎಸ್ ಶೆಟ್ಟಿ ಅವರು ಸ್ಪರ್ದಿಸುವಂತೆ ನಿನ್ನೆ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಒತ್ತಾಯ ಮಾಡಿದ್ದರು.
ಕೊಪ್ಪದ ಗುಣವಂತೆಯಲ್ಲಿರುವ ಜೆಡಿಎಸ್ ನಾಯಕರಾದ ಹೆಚ್. ಜಿ ವೆಂಕಟೇಶ್ ರವರ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಿದ್ದಾರೆ. ಇನ್ನು ಸಭೆಯಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಮತ್ತು NDA, I.N.D.I.A ಯ ಎರಡು ಘಟಬಂಧನಗಳ ಕಾರ್ಯವೈಖರಿಯನ್ನು ಅಮೂಲಾಗ್ರವಾಗಿ ಚರ್ಚಿಸಲಾಯಿತು. ಜೆಡಿಎಸ್ ಪಕ್ಷವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಪಕ್ಷದ ಮೇಲೆ ಆಗುವ ಪರಿಣಾಮಗಳನ್ನು ವಿಸ್ತಾರವಾಗಿ ಪದಾಧಿಕಾರಿಗಳು ಚರ್ಚಿಸಿದರು. ಮೈತ್ರಿಯ ರೂಪುರೇಖೆಗಳು ಏನು ಎನ್ನುವುದನ್ನು ಕೊಪ್ಪ, ಎನ್ ಆರ್ ಪುರ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಖಾಂಡ್ಯ ಘಟಕಗಳ ಅಧ್ಯಕ್ಷರುಗಳು ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ. ಚುನಾವಣೆ ಹೊಂದಾಣಿಕೆ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಸ್ಥಳೀಯ ಸಂಘ-ಸAಸ್ಥೆಗಳವರೆಗೆ ನಡೆದರೆ ಮಾತ್ರ ಮೈತ್ರಿಗೆ ಒಂದು ಅರ್ಥವಿರುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಘಟಕದ ನಾಯಕರುಗಳು, ಜೆಡಿಎಸ್ ಬಿಜೆಪಿ ಮೈತ್ರಿ ವತಿಯಿಂದ ಯಾವುದೇ ಕಾರಣಕ್ಕೂ ರಾಜ್ಯದ ಅಲ್ಪಸಂಖ್ಯಾತರ ಮೇಲೆ ಯಾವುದೇ ತೊಂದರೆ ಆಗಲಿ ದಬ್ಬಾಳಿಕೆ ಆಗಲಿ ನಡೆಯಲಾರದು. 2006 ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಸರ್ಕಾರ ಮಾಡಿದಾಗಲೂ ಎಲ್ಲಾ ಅಲ್ಪಸಂಖ್ಯಾತರ ಹಿತ ರಕ್ಷಣೆಯನ್ನು ಜೆಡಿಎಸ್ ಪಕ್ಷಕ್ಕಾಗಿದೆ. ಅಲ್ಪಸಂಖ್ಯಾತರ ಕಾನೂನುಗಳಿಗೆ ಶೇಖರ 4% ನೀಡಿರುವುದು ಹೆಚ್. ಡಿ ದೇವೇಗೌಡರು ಹಾಗೂ ಕುಮಾರಣ್ಣ ಎನ್ನುವುದನ್ನು ಸಭೆಯ ಗಮನಕ್ಕೆ ತಂದರು.
ಕಳೆದ ವಿಧಾನಸಭೆ ಚುನಾವಣೆಯೆ ಬೇರೆ ಮುಂಬರುವ ಲೋಕಸಭೆ ವಿಧಾನಸಭೆಗಳೆ ಬೇರೆ ಆದ್ದರಿಂದ ಅಲ್ಪಸಂಖ್ಯಾತರಲ್ಲಿ ಕೆಲವು ರಾಜಕೀಯ ನಾಯಕರುಗಳು ಮಾತನಾಡುವ ರೀತಿಯೇ ಬೇರೆ ಆದರೆ ದೇವೇಗೌಡರ ಬಗ್ಗೆ ಅಲ್ಪಸಂಖ್ಯಾತರ ಸಮುದಾಯ ಸಂಪೂರ್ಣ ನಂಬಿಕೆ ಹೊಂದಿದೆ ಎನ್ನುವುದನ್ನು ಅಲ್ಪಸಂಖ್ಯಾತರ ಮುಖಂಡರುಗಳು ಸ್ಪಷ್ಟಪಡಿಸಿದರು.
ಹೆಚ್. ಜಿ ವೆಂಕಟೇಶ್ ಮಾತನಾಡಿ, ರವರು ಎಲ್ಲಾ ಸಮುದಾಯ ವರ್ಗಗಳ ಹಿತ ರಕ್ಷಣೆ ಕಾಯುವುದೇ ಜೆಡಿಎಸ್ ಪಕ್ಷದ ಮುಖ್ಯ ಉದ್ದೇಶ. ಇಲ್ಲಿ ಅಲ್ಪಸಂಖ್ಯಾತರು ದಲಿತರು ಹಿಂದುಳಿದವರು ಹಾಗೂ ರೈತಾಪಿ ವರ್ಗದ ಹಿತ ರಕ್ಷಣೆಯನ್ನು ಜೆಡಿಎಸ್ ಪಕ್ಷವು ಕಾಪಾಡುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯದ ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಸದಸ್ಯರಾದ ಸುಧಾಕರ್ ಎಸ್ ಶೆಟ್ಟಿ, ಬಿ. ಹೆಚ್ ದಿವಾಕರ್ ಭಟ್, ಕಳಸಪ್ಪ, ಚಂದ್ರಶೇಖರ್, ಪೂರ್ಣಚಂದ್ರ ಹಾಗೂ ಸದಸ್ಯರುಗಳು ಇದ್ದರು.













