
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿದ್ದು ಚಾಲಕ ಸಮಯ ಪ್ರಜ್ಞೆಯಿಂದ ಪ್ರಯಾಣಿಕರನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಸಮೀಪ ನಡೆದಿದೆ.

ಇದನ್ನೂ ಓದಿ: ಬಾಕಿ ಉಳಿದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ; ಈ ರೀತಿ ಮಾಡದೇ ಇದ್ದರೆ ರೈತರಿಗೆ ಸಿಗಲ್ಲ ಪರಿಹಾರ

ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಐರಾವತ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಬಸ್ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಎಲ್ಲಾ 39 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಸೋಮವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಈ ಘಟನೆ ನಡೆದಿದೆ. ತರೀಕೆರೆ ಸಮೀಪದ ಅಜ್ಜಂಪುರ ಕ್ರಾಸ್ ಬಳಿ ತೆರಳುತ್ತಿದ್ದ ಬಸ್ ಹಿಂಭಾಗದ ಇಂಜಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.


ಇದನ್ನೂ ಓದಿ: ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
ಇದನ್ನು ಗಮನಿಸಿದ ಚಾಲಕ ಸುಬ್ರಹ್ಮಣ್ಯ ಕೂಡಲೇ ರಸ್ತೆ ಬದಿಗೆ ಬಸ್ ನಿಲ್ಲಿಸಿದ್ದು, ನಿದ್ದೆಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಬಾಳೆಹೊನ್ನೂರು: ಕೃಷಿಕನ ಆತ್ಮಹತ್ಯೆ ಪ್ರಕರಣ: ಶೃಂಗೇರಿ ಶಾಸಕರ ಆಪ್ತರೊಬ್ಬರಿಂದ ಸಾಕ್ಷಿದಾರನಿಗೆ ಬೆದರಿಕೆ ಆರೋಪ
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಬಸ್ತಿ ಬಾಳಕ್ಕಿ ತೋಟದ ಮಾಲೀಕ ಸುರೇಶ್, ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೊವನ್ನು ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಪಡಿಸಿದ್ದರು. ಈ ಸಂಬಂಧ ಜಯಪುರ ಪೋಲಿಸ್ ಠಾಣೆಯಲ್ಲಿ 6 ಜನರ ವಿರುದ್ಧ FIR ದಾಖಲಿಸಲಾಗಿತ್ತು. ಆದರೆ, ಇದೀಗ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರ ಆಪ್ತರೊಬ್ಬರು ರಾಘವೇಂದ್ರ ಎಂಬುವವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?; ಅಡಿಕೆ ಮಾರುಕಟ್ಟೆ ಹೇಗಿದೆ| ಬೆಟ್ಟೆ, ಗೊರಬಲು, ಸರಕು, ಈಡಿ
ಏನಿದು ಘಟನೆ:
2023 ರ ಅಕ್ಟೋಬರ್ 2 ರಂದು ಕೊಪ್ಪದ ಬಸ್ತಿ ಬಾಳಕ್ಕಿ ತೋಟದ ಮಾಲೀಕ ಸುರೇಶ್, ರಾಘವೇಂದ್ರ ಎಂಬುವವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಸುರೇಶ್ ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೋವನ್ನ ಕಳೆದ ತಿಂಗಳು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಪಡಿಸಿದ್ದರು. ಆ ವಿಡಿಯೋದಲ್ಲಿ ಬಸ್ತಿ ಬಾಳಕ್ಕಿಯಲ್ಲಿ 3.5 ಎಕರೆ ಜಾಗದ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಹಾಗೂ ಕೆಲ ವ್ಯಕ್ತಿಗಳು ನೀಡಿದ ಕಿರುಕುಳ ಹಾಗೂ ಹಲ್ಲೆಯಿಂದ ಮಾನಸಿಕವಾಗಿ ನೊಂದು ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಹಲ್ಲೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ರಾಘವೇಂದ್ರ ಇದ್ದು, ಜಯಪುರ ಠಾಣೆಯಲ್ಲಿ ಎಸ್ಸಿ.ಎಸ್.ಟಿ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ಆದರೆ ಇದೀಗ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರ ಆಪ್ತರೊಬ್ಬರು ರಾಘವೇಂದ್ರ ವಿರುದ್ಧ FIR ದಾಖಲಿಸುವುದಾಗಿ ಫೋನ್ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಆತ್ಮಹತ್ಯೆ ವಿಚಾರದಲ್ಲಿ ಅಪರಾದಿಗಳು ಮತ್ತು ಶಾಸಕರು ಸೇರಿಕೊಂಡು ಕೇಸನ್ನು ಮುಚ್ಚಿ ಹಾಕುವ ಅನುಮಾನವನ್ನು ವ್ಯಕ್ತಪಡಿಸಿ, ಮಾನ್ಯ ಮುಖ್ಯಮಂತ್ರಿಗಳು ಸಿಬಿಐ ಗೆ ಈ ಪ್ರಕರಣವನ್ನು ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಯೊಂದಿಗೆ ಹಿಡುವಳಿಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದರ ಜೊತೆಗೆ ಕಾನೂನನ್ನು ದುರುಪಯೋಗ ಮಾಡಿಸಿಕೊಂಡಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಡಬಲ್ ಧಮಾಕಾ!; ಇಂತಹ ರೈತರ ಬ್ಯಾಂಕ್ ಖಾತೆಗೆ 9,500 ರೂಪಾಯಿ ಜಮಾ













