
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯನನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗಣೇಶ್ (38) ಹತ್ಯೆಯಾದ ಕಾಂಗ್ರೆಸ್ ಗ್ರಾಪಂ ಸದಸ್ಯ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ನಿಮ್ಮ ಬಾಕಿ ದಂಡವನ್ನು ಶೇ.50 ರ ರಿಯಾಯಿತಿಯೊಂದಿಗೆ ಪಾವತಿಸಲು ಡಿ.12 ಕೊನೆಯ ದಿನ

ರಾತ್ರಿ 10.30ರ ವೇಳೆಗೆ ಕಲ್ಮುರುಡೇಶ್ವರ ಮಠದ ಬಳಿ ಬ್ಯಾನರ್ ವಿಚಾರವಾಗಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಎದುರಾಳಿ ಗುಂಪಿನ ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ; ಲ್ಯಾಪ್ ಟಾಪ್ ಪಡೆಯಲು ಅರ್ಜಿ ಆಹ್ವಾನ
ಕೊಲೆಗೂ ಮುನ್ನ ಸಖರಾಯಪಟ್ಟಣ ಬಾರ್ ಬಳಿ ಗಲಾಟೆಯಾಗಿತ್ತು. ಬಾರ್ ಬಳಿ ಗಲಾಟೆಯಾದ ಅರ್ಧ ಗಂಟೆ ಬಳಿಕ ಮಠದ ಬಳಿ ಗಲಾಟೆಯಾಗಿ ಹತ್ಯೆ ಮಾಡಲಾಗಿದೆ. ಘಟನೆ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಮಾ ಕಂಪನಿಯಲ್ಲಿ 300 ಹುದ್ದೆಗಳಿಗೆ ನೇಮಕಾತಿ: ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ














