
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಗಂಡಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಶಿಕ್ಷಕನ ನಿಯೋಜನೆಯನ್ನು ವಿರೋಧಿಸಿ ಪೋಷಕರು ಮತ್ತು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಗುರುವಾರ ಧರಣಿ ನಡೆಸಿದರು.
ಇದನ್ನೂ ಓದಿ: ಆರೋಗ್ಯ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು, 15,397 ಸಂಬಳ

ತರೀಕೆರೆ ತಾಲ್ಲೂಕಿನ ಬಸವನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿದ್ದರಾಮಪ್ಪ ಎಂಬ ಶಿಕ್ಷಕ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಂತಹ ಶಿಕ್ಷಕರನ್ನು ಗಂಡಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಈ ಶಿಕ್ಷಕನಿಂದ ನಮ್ಮ ಶಾಲೆಯ ಗೌರವ ಹಾಳಾಗುತ್ತದೆ ಎಂದು ಶಾಲೆಯ ಪೋಷಕ ಪ್ರಶಾಂತ್ ಕಲ್ಮಕ್ಕಿ ದೂರಿದರು.

2020ರಲ್ಲಿ ಮುಚ್ಚುವ ಹಂತ ತಲುಪಿದ್ದ ಶಾಲೆ ಈಗ ದಾನಿಗಳು ಮತ್ತು ಶಾಸಕರ ಸಹಕಾರದಿಂದ ಅಭಿವೃದ್ಧಿಗೊಂಡು 155 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಸರ್ಕಾರಿ ಶಾಲೆಗಳು ಉಳಿಯುವುದೇ ಕಷ್ಟ. ಗ್ರಾಮಸ್ಥರು ಬಹಳ ನಂಬಿಕೆಯಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪೋಕ್ಸೋ ಆರೋಪ ಎದುರಿಸುತ್ತಿರುವ ಶಿಕ್ಷಕನನ್ನು ನೇಮಿಸಿದರೆ ಶಾಲೆ ಮುಚ್ಚುವ ಸ್ಥಿತಿಗೆ ಬರಲಿದೆ. ಹಾಗಾಗಿ ಶಿಕ್ಷಕನನ್ನು ನಿಯೋಜನೆಗೊಳ್ಳುವುದು ಬೇಡ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸಿಗರೇಟ್ ಸೇದಿದ್ರೆ ರಿಲ್ಯಾಕ್ಸ್ ಸಿಗಲ್ಲ; ಭಯಾನಕ ಸತ್ಯ ಬಯಲು!
ಗ್ರಾಮಸ್ಥರಾದ ಪ್ರಿಯಾ ಮಂಜುನಾಥ್ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ ಶಿಕ್ಷಕಿಯರೇ ಉತ್ತಮವಾಗಿ ಬೋಧನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಶಿಕ್ಷಕ ನಿಯೋಜನೆಗೊಂಡರೆ ಮಕ್ಕಳು ದಾಖಲಾತಿ ಸಂಖ್ಯೆ ಕುಸಿಯಲಿದೆ. 1961ರಲ್ಲಿ ಶಾಲೆ ಸ್ಥಾಪನೆಗೊಂಡು ಅಲ್ಲಿ ಓದಿದ ವಿದ್ಯಾರ್ಥಿಗಳು ಪ್ರಸ್ತುತ ಉನ್ನತ ಮಟ್ಟದ ಹುದ್ದೆಯಲ್ಲಿದ್ದಾರೆ. ಅದರಿಂದ ದಯವಿಟ್ಟು ಇಂತಹ ಶಿಕ್ಷಕನನ್ನು ನೇಮಿಸಿ ಶಾಲೆಯನ್ನು ಹಾಳುಮಾಡಬೇಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ ಉಳಿತಾಯದ ಜೊತೆಗೆ ಭರ್ಜರಿ ಲಾಭ; ಹೆಣ್ಣು ಮಕ್ಕಳ ಭವಿಷ್ಯಕ್ಕೆ ಬಲ, ಸಣ್ಣ ಹೂಡಿಕೆ, ದೊಡ್ಡ ಭವಿಷ್ಯ













