
ಎನ್. ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ ಪ್ರತಿದಿನ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗುತ್ತಿದ್ದು, ಇದರಿಂದ ರಾವೂರು, ಹಾಗಲಮನೆ ಸೇರಿದಂತೆ ಹತ್ತಾರು ಗ್ರಾಮದ ಜನರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: ಈ ಕಾರ್ಡ್ ಇದ್ರೆ ಸರ್ಕಾರದಿಂದ ಸಿಗಲಿವೆ ಈ ಸೌಲಭ್ಯಗಳು

ಕಾಡಾನೆಗಳು ಕುಡಿಯುವ ನೀರಿಗೆ ಭದ್ರಾ ಹಿನ್ನೀರನ್ನೇ ಅವಲಂಬಿಸಿವೆ. 27 ಆನೆಗಳ ಹಿಂಡು ಭದ್ರಾ ಹಿನ್ನೀರಿನಲ್ಲಿ ಬೀಡುಬಿಟ್ಟಿರುವ ದೃಶ್ಯ ಸೆರೆಯಾಗಿದೆ.

ಡ್ರೋನ್ ಶಬ್ದದ ಮೂಲಕ ಕಾಡಾನೆ ಓಡಿಸುವ ಕಾರ್ಯಚರಣೆ:
ಭದ್ರಾ ಹಿನ್ನೀರಿನಲ್ಲಿ ಬೀಡುಬಿಟ್ಟಿರುವ 27 ಕಾಡಾನೆಗಳ ಹಿಂಡನ್ನು ಓಡಿಸಲು ಅರಣ್ಯ ಇಲಾಖೆ, ETF ಸಿಬ್ಬಂದಿ ಡ್ರೋನ್ ಮೋರೆ ಹೋಗಿದ್ದು, ಡ್ರೋನ್ ಶಬ್ದದ ಮೂಲಕ ಕಾಡಾನೆ ಓಡಿಸುವ ಕಾರ್ಯಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಲೇಬರ್ ಕಾರ್ಡ್‌ಗೆ ರೂ.60,000 ಸಹಾಯಧನ: ಸರ್ಕಾರದ ವಿಶೇಷ ಯೋಜನೆ
ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದು, ಭದ್ರಾ ಅಭಯಾರಣ್ಯಕ್ಕೆ ತೆರಳಿ ಮತ್ತೆ ಕಾಡಾನೆ ವಾಪಸ್ ಆಗುತ್ತಿದೆ. ಇದರಿಂದ ಭದ್ರಾ ಹಿನ್ನೀರಿನ ಸುತ್ತಮುತ್ತಲಿನ ಗ್ರಾಮದ ಜನರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ; 18,000 ದಿಂದ 22,000 ಸಂಬಳ, 10th ವಿದ್ಯಾರ್ಹತೆ













