ಎನ್.‌ ಆರ್.‌ ಪುರ: ವಾಹನ ಅಡ್ಡಗಟ್ಟಿ ಬೆಲೆಬಾಳುವ ವಸ್ತು ದೋಚಿದ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಎನ್.‌ ಆರ್.‌ ಪುರ: (ನ್ಯೂಸ್ ಮಲ್ನಾಡ್ ವರದಿ) ವಾಹನ ಅಡ್ಡಗಟ್ಟಿ ಸುಮಾರು 2.55.000 ರೂ. ಬೆಲೆಬಾಳುವ ವಸ್ತುಗಳನ್ನು ದೋಚಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ


ಪಿಕಪ್ ವಾಹನವೊಂದರಲ್ಲಿ ತೀರ್ಥಹಳ್ಳಿಯಿಂದ ರಾತ್ರಿ ಎನ್. ಆರ್. ಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿ ವಾಪಾಸ್ಸಗುವಾಗ ಶಿವಮೊಗ್ಗ ಮುಖ್ಯ ರಸ್ತೆಯಲ್ಲಿನ ಆರಂಭಳ್ಳಿ ಬಸ್ ನಿಲ್ದಾಣದ ಬಳಿ 8-10 ಜನ ಆರೋಪಿಗಳು ವಾಹನವನ್ನು ಅಡ್ಡಗಟ್ಟಿದ್ದಾರೆ. ಕಬ್ಬಿಣದ ರಾಡ್ ನಿಂದ ಮತ್ತು ಕೈನಿಂದ ಪಿಕಪ್ ವಾಹನದ ಚಾಲಕ ಮತ್ತು ಹೆಲ್ಪರ್ ಗೆ ಹಲ್ಲೆ ಮಾಡಿ ಹಣ ಹಾಗೂ ಬೆಳ್ಳಿ ದೋಚಿ ಪರಾರಿಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಸತ್ಯಾನಂದ (26), ಸಯ್ಯದ್ ಲತೀಫ್ (25) ಬಂಧಿಸಿ, ದೋಚಿದ್ದ ಒಂದು ಬೆಳ್ಳಿಯ ಬ್ರಾಸ್ ಲೈಟ್, ಒಂದು ಬೆಳ್ಳಿಯ ಸರ, 2 ಮೊಬೈಲ್ ಒಂದು ಸೌಂಡ್ ಸಿಸ್ಟಂ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1 ಹೊಂಡಾಸಿಟಿ ಕಾರು ಮತ್ತು ಕೃತ್ಯಕ್ಕೆ ಬಳಸಿದ ಒಂದು ಲಾಂಗ್, ಒಂದು ಕಬ್ಬಿಣದ ರಾಡ್ ಸೇರಿದಂತೆ 2.55.000/- ರೂ ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ


ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಗು ಮಾನ್ಯ ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪ ವಿಭಾಗ ರವರಾದ ಎಂ ಜೆ ಬಾಲಾಜಿ ಸಿಂಗ್ ಮತ್ತು ಎನ್.ಆರ್ ಪುರ ವೃತ್ತ ನಿರೀಕ್ಷಕರರಾದ ಶ್ರೀ, ಗುರುದತ್ ಕಾಮತ್ ರವರ ಮಾರ್ಗದರ್ಶನದಲ್ಲಿ ಎನ್.ಆರ್ ಪುರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಬಿ.ಎಸ್ ನಿರಂಜನ್ ಗೌಡ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿನು ಪಿ.ಎ ಅಮಿತ್ ಚೌಗುಲೆ, ದೇವರಾಜ, ಮಧು ಎಸ್.ಜಿ, ಯುಗಾಂಧರ್, ಶಿವರುದ್ರಪ್ಪ, ಕೌಶಿಕ್ ಹೆಚ್.ಸಿ, ಹಾಗು ಬಾಳೆಹೊನ್ನೂರು ಠಾಣೆಯ ಅಪರಾಧ ವಿಭಾಗದ ಶಂಕರ್ ಕೆ.ಜೆ ರವರ ತಂಡವನ್ನು ರಚನೆ ಮಾಡಿದ್ದು ಹಾಗು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್ ಅಂಜುಂ ಹಾಗು ರಬ್ಬಾನಿ ಈ ಕಾರ್ಯಾಚರಣೆಯಲ್ಲಿ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.