ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬವನ್ನೂ ಜೊತೆಗೆ ಎಳೆದೊಯ್ದ ಘಟನೆ ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಇದನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ

ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ರಭಸಕ್ಕೆ ನೆಲದಲ್ಲಿ ಹೂತಿದ್ದ ವಿದ್ಯುತ್ ಕಂಬ 50 ಅಡಿ ದೂರ ಕಾರಿನೊಂದಿಗೆ ಸಾಗಿದೆ. ಅದರ ಜೊತೆ ಕಂಬಕ್ಕೆ ಹಾಕಿದ್ದ ಗೌಂಡಿಂಗ್ ವೈರ್ ಕೂಡ ಕಿತ್ತು ಕಂಬದ ಜೊತೆಗೆ ಹೋಗಿದೆ. ಕಂಬ ಮುರಿದು ಬೀಳುತ್ತಿದ್ದಂತೆ ವೈರ್ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಭಾರೀ ಅನಾಹುತ ತಪ್ಪಿದೆ.


ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ಅಪಘಾತ ನಡೆದಿದ್ದು, ಕಾರು ಕಂಬಕ್ಕೆ ಡಿಕ್ಕಿಯಾಗುತ್ತಿದ್ದಂತೆ ಏರ್ ಬ್ಯಾಗ್ ಓಪನ್ ಆಗಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್ ಶಿಪ್ ಗೆ ಹೀಗೆ ಅರ್ಜಿ ಸಲ್ಲಿಸಿ
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.













