
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರಸಭೆ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯೊಂದು ಬುಧವಾರ ನಡೆದಿದ್ದು, ಅಧ್ಯಕ್ಷ ಕೊಠಡಿಯಲ್ಲಿದ್ದ ಸೋಫಾ ಚೇರ್ ತೆಗೆದು, ಪ್ಲಾಸ್ಟಿಕ್ ಚೇರ್ ಇಡಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-25.10.2023

ರಾಜೀನಾಮೆ ವಾಪಸ್ ಪಡೆದಿದ್ದ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿರುವ ಬಿಜೆಪಿ ಸದಸ್ಯರು, ಬುಧವಾರ ಕಚೇರಿಯ ಒಳ ಹೋಗಿ ಅಲ್ಲಿದ್ದ ಸೋಫಾ ಚೇರ್ ತೆಗೆದು ಪ್ಲಾಸ್ಟಿಕ್ ಕುರ್ಚಿಯೊಂದನ್ನು ಇರಿಸಿದರು. ಮೊದಲಿದ್ದ ಸೋಫಾ ಚೇರ್ ಮತ್ತು ಆ ಜಾಗದಲ್ಲಿ ಇರಿಸಿದ್ದ ಪ್ಲಾಸ್ಟಿಕ್ ಕುರ್ಚಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಬಿಜೆಪಿ ಸದಸ್ಯರ ಬೆಂಬಲ ಇದ್ದಾಗ ಸುಖಾಸೀನ ಖುರ್ಚಿ, ಇಲ್ಲದಿದ್ದಾಗ ಪ್ಲಾಸ್ಟಿಕ್ ಕುರ್ಚಿ ಎಂದು ಬರೆದು ಚಿತ್ರಗಳನ್ನು ವಾಟ್ಸ್ಯ್ಯಾಪ್ ಗ್ರೂಪ್ ಗಳಲ್ಲೂ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ; ತುಸು ಏರಿದ ಚಿನ್ನದ ಬೆಲೆ; ಬೆಳ್ಳಿಯೂ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ
ಇನ್ನು ಎರಡು ಬಾರಿ ರಾಜೀನಾಮೆ ನೀಡಿ ಹಿಂಪಡೆದಿರೋ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಬಿಜೆಪಿ ಸದಸ್ಯರೇ ಆಕ್ರೋಶ ಹೊರಹಾಕಿದ್ದು, ನಗರಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಕಲ್ಪಿಸಲಾಗಿದೆ.
Khandya Temple: ಹುಲಿ ಉಗುರು ಧರಿಸಿದ್ದ ಆರೋಪದಡಿ ದೇವಸ್ಥಾನದ ಅರ್ಚಕರಿಬ್ಬರ ಬಂಧನ
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಆರೋಪದ ಮೇಲೆ ದೇವಸ್ಥಾನದ ಪ್ರಧಾನ ಅರ್ಚಕರಿಬ್ಬರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯದಲ್ಲಿ ನಡೆದಿದೆ.
ಬಾಳೆಹೊನ್ನೂರು ಸಮೀಪದ ಖಾಂಡ್ಯಾದ ಪ್ರಸಿದ್ಧ ಮಾರ್ಕಾಂಡೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್ ಬಂಧಿತರು. ಸದ್ಯ ಇಬ್ಬರನ್ನು ಅರಣ್ಯ ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿದೆ. ಬಂಧಿತರಿಂದ ಮೂರು ಹುಲಿ ಉಗುರು ವಶಕ್ಕೆ ಪಡೆಯಲಾಗಿದೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಇಬ್ಬರನ್ನು ಬಂಧಿಸಿದ್ದ ಅರಣ್ಯ ಇಲಾಖೆ
ಹುಲಿ ಉಗುರು ಧರಿಸಿದ್ದ ಆರೋಪದಡಿ ಮೂಡಿಗೆರೆ ತಾಲೂಕಿನ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ತಾಲೂಕಿನ ಬಿ.ಹೊಸಳ್ಳಿಯ ಕುಂಡ್ರ ನಿವಾಸಿ ಸತೀಶ್ ಮತ್ತು ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ರನ್ನು ಬಂಧಿಸಲಾಗಿತ್ತು.
ಹುಲಿ ಉಗುರು ಧರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ ಸತೀಶ್ನನ್ನು ಚಿಕ್ಕಮಗಳೂರು ಸಮೀಪದ ಮತ್ತಾವರ ಅರಣ್ಯ ಮಾಹಿತಿ ಕೇಂದ್ರದ ಬಳಿ ತಡೆದು ಬಂಧಿಸಿದ್ದರು.
ಸತೀಶ್ ಕುತ್ತಿಗೆಗೆ ಧರಿಸಿದ್ದ ಬೆಳ್ಳಿ ಸರದಲ್ಲಿ ಹುಲಿ ಉಗುರು ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹುಲಿ ಉಗುರನ್ನು ತನಗೆ ಮೂಡಿಗೆರೆ ತಾಲೂಕಿನ ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ನೀಡಿದ್ದು ಎಂದು ಮಾಹಿತಿ ನೀಡಿದ್ದನು. ನಂತರ ರಂಜಿತ್ನನ್ನು ಹುಲ್ಲೇ ಮನೆಯ ನಿವಾಸದಲ್ಲಿ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ವ್ಯಕ್ತಿಯೊಬ್ಬರು ದೂರು ನೀಡಿದ ಆಧಾರದ ಮೇರೆಗೆ ರಾಜರಾಜೇಶ್ವರಿ ನಗರದ ಬಳಿ ರಿಯಾಲಿಟಿ ಶೋ ನಡೆಯುತ್ತಿದ್ದ ಬಿಗ್ಬಾಸ್ ಮನೆಗೆ ಭಾನುವಾರ ರಾತ್ರಿ ತೆರಳಿದ್ದ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದರು. ಸದ್ಯ ವರ್ತೂರು ಸಂತೋಷ್ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ರಾಜ್ಯಾದ್ಯಂತ ಅರಣ್ಯ ಇಲಾಖೆ ಹುಲಿ ಉಗುರು ಧರಿಸಿದವರ ಮೇಲೆ ಕ್ರಮ ಕೈಗೊಳ್ಳಲು ಸಜ್ಜಾಗಿದೆ.












