ಮನೆ ಎದುರು ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ!

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಮನೆ ಎದುರು ಮಲಗಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ತಾಲೂಕಿನ ಹೊದಲ ಅರಳಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.


ನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಅರಳಾಪುರ ಗ್ರಾಮದ ವಡ್ಡಿನಬೈಲು ಟಿ. ಜಿ. ಜಗದೀಶ್ ಅವರ ಸಾಕು ನಾಯಿ ಮನೆಯ ಮುಖ್ಯದ್ವಾರದ ಹೊಸ್ತಿಲಲ್ಲಿ ಮಲಗಿದ್ದ ವೇಳೆ ತಡರಾತ್ರಿ 11 ಗಂಟೆಯ ಸಮಯ ಚಿರತೆಯೊಂದು ದಾಳಿ ಮಾಡಿದೆ. ಪರಿಣಾಮ ನಾಯಿಯ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಚಿರತೆ ದಾಳಿಯಿಂದಾಗಿ ಸ್ಥಳೀಯರು ಓಡಾಡಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊದಲ-ತೀರ್ಥಹಳ್ಳಿ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡುವವರು ಜಾಗೃತೆ ವಹಿಸಲು ಹಾಗೂ ಒಂಟಿ ಮನೆಯಿರುವ ಮನೆಯ ಆವರಣ, ದನದ ಕೊಟ್ಟಿಗೆಯ ಲೈಟ್ ಗಳನ್ನು ರಾತ್ರಿ ವೇಳೆಯೂ ಹಾಕಿರುವಂತೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ಸ್ಥಳಕ್ಕಾಗಮಿಸಿ ರಾತ್ರಿ ಗಸ್ತು ನಡೆಸುವುದಾಗಿ ತಿಳಿಸಿದ್ದಾರೆ.


ನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್‌ ನಲ್ಲೇ ಸಿಗಲಿದೆ ಹಳೆಯ ಪಹಣಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.