ಮೇಲ್ಪಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮೇಲ್ಪಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು 28.01.2024 ರಿಂದ (ಭಾನುವಾರ) 29.01.2024 ರವರೆಗೆ (ಸೋಮವಾರದ) ಎರಡು ದಿನಗಳ ಕಾಲ ಮೇಲ್ಪಾಲ್ ಯುವಕ ಸಂಘದ ಗೆಳೆಯರ ಬಳಗ ಇವರ ವತಿಯಿಂದ ನೆರವೇರಿಸಲಾಯಿತು.

 

ಇದನ್ನೂ ಓದಿ; ನಿಮ್ಮ ವಾಹನದ ಫಾಸ್ಟ್ ಟ್ಯಾಗ್‌ KYC ಆಗಿದ್ಯಾ?;ಈ ದಿನದೊಳಗೆ ಫಾಸ್ಟ್‌ ಟ್ಯಾಗ್‌ ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್‌ ಲೈನ್

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ PDO, ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಬಾಳೆಹೊನ್ನೂರು ಪೊಲೀಸ್ ಠಾಣಾಧಿಕಾರಿಯಾದ ದಿಲೀಪ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.

ಇದನ್ನೂ ಓದಿ; ಶಿವಮೊಗ್ಗ GTTC ಯಲ್ಲಿ ಉದ್ಯೋಗವಕಾಶ; ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಏನು?

ಕಾಡಿನ ನಡುವೆ ತೇಜಸ್ವಿ ಕೃತಿಗಳ ಓದು

 

ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಸದಾ ಪ್ರವಾಸಿಗರಿಂದ ಗಿಜಿಗುಡುವ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಶನಿವಾರ ಪರಿಸರ ಸಂರಕ್ಷಣೆಯ ಕುರಿತು ತೇಜಸ್ವಿ ಅವರ ಕೃತಿಗಳ ಓದಿನ ಸದ್ದು ಎಲ್ಲೆಡೆ ಮನೆ ಮಾಡಿತ್ತು.

ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಆಯೋಜಿಸಿದ್ದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಚಾರಣಿಗರು ಸುತ್ತ ಕಣ್ಣು ಆಯಿಸಿದಷ್ಟು ದೂರವೂ ಹಬ್ಬಿರುವ ಹಸಿರು ಅರಣ್ಯದ ನಡುವೆ ಒಂದೆಡೆ ಸೇರಿ ತೇಜಸ್ವಿ ಕೃತಿಗಳ ಕೆಲ ಸಾಲುಗಳನ್ನು ಓದಿದರು.

ಕೀಟತಜ್ಞರಾದ ಮೂಡಿಗೆರೆಯ ಅವಿನಾಶ್ ಮಾತನಾಡಿ, ಪರಿಸರದ ಬಗ್ಗೆ ಬೆರಗು ಮತ್ತು ಪರಿಸರದ ಉಳಿವಿನ ಮಹತ್ವವನ್ನು ತೇಜಸ್ವಿ ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ತೇಜಸ್ವಿ ಕೃತಿಗಳಿಂದಾಗಿ ಹೊಸದೊಂದು ಓದುಗ ವರ್ಗ ಸೃಷ್ಠಿಯಾಗಿ ಓದಿನ ರುಚಿ ಎಲ್ಲರಲ್ಲೂ ಮೂಡುತ್ತಿದೆ. ಪರಿಸರ, ಜೀವಸಂಕುಲ, ಬಾಹ್ಯಾಕಾಶ, ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದರು.

ಮಂಡ್ಯದ ಅಂಶು ಅವರು ಪರಿಸರದ ಕಥೆ, ಚಿಕ್ಕಮಗಳೂರಿನ ಕಾರ್ತಿಕ್ ಎಂ.ಕೆ ಹುಲಿಯೂರಿನ ಸರಹದ್ದು, ದೀಪಗೌಡ ಅವರು ಪಾಕಕ್ರಾಂತಿ, ತುಮಕೂರಿನ ಪಲ್ಲವಿ ರಂಗನಾಥ್ ಮಾಯಾಲೋಕ, ಚಿತ್ರದುರ್ಗದ ದಿನೇಶ್ ಕೆ.ಎಸ್ ಅವರು ಮಿಸ್ಸಿಂಗ್ ಲಿಂಕ್, ಬೆಂಗಳೂರಿನ ಪ್ರೇಮ ಅವರು ಹೆಜ್ಜೆ ಮೂಡದ ಹಾದಿ, ಬೆಂಗಳೂರಿನ ಸುನಿತಾ ಮತ್ತು ವಿನೋದ್ ಅವರು ವಿಸ್ಮಯ ವಿಶ್ವ, ಶಿರಾದ ಶ್ರೀನಾಥ್ ಅವರು ಪಾಕಕ್ರಾಂತಿ, ಮೂಡಿಗೆರೆಯ ಅವಿನಾಶ್ ಅವರು ಪಾಕಕ್ರಾಂತಿ, ನಂದೀಶ್ ಬಂಕೇನಹಳ್ಳಿ ಅವರು ಕರ್ವಾಲೊ, ಕೃತಿಯನ್ನು ಓದಿದರು. ಚಿಕ್ಕಮಗಳೂರಿನ ಸತ್ಯನಾರಾಯಣ, ಓಂಕಾರಪ್ಪ, ಹಾಸನದ ಬಾಲು ತೇಜಸ್ವಿ ಅವರ ಬದುಕು ಬರಹದ ಕುರಿತು ಚರ್ಚೆ ನಡೆಸಿದರು.

ಪರಿಸರದ ಸಂರಕ್ಷಣೆ, ತೇಜಸ್ವಿ ಅವರ ಬದುಕು, ಬರಹಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಕಾಡಿನಲ್ಲಿ ಓದು ಕಾರ್ಯಕ್ರಮಕ್ಕೂ ಮುನ್ನ ರಾಣಿಝರಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಚಾರಣ ನಡೆಸಲಾಯಿತು. ಕೀಟತಜ್ಞರಾದ ಅವಿನಾಶ್ ಅವರು ಕೀಟಗಳ ಬಗ್ಗೆ ಮಾಹಿತಿ ನೀಡಿದರು. ಪ್ಲಾಸ್ಟಿಕ್ ನ್ನು ಎಲ್ಲಿಯೂ ಬಳಕೆ ಮಾಡದೇ ಪ್ಲಾಸ್ಟಿಕ್ ಮುಕ್ತ ಚಾರಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಕೀಟ ತಜ್ಞರಾದ ಅವಿನಾಶ್, ತೇಜಸ್ವಿ ಅವರ ಒಡನಾಡಿ ಹಾಗೂ ಕಲಾವಿದರಾದ ಬಾಪುದಿನೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಭಿಲಾಷ್, ಚಂದನ್ ಸಿಬ್ಬಂದಿ ಭವಿತ್ ಹಾಗೂ ರಾಜ್ಯದ ವಿವಿದೆಡೆಯಿಂದ ಆಗಮಿಸಿದ 40 ಕ್ಕೂ ಹೆಚ್ಚು ಚಾರಣಿಗರು ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.