ಹಿಂದು ವಿದ್ಯಾರ್ಥಿನಿಯಿಂದ ಕಾಲೇಜಿನ ಸಮವಸ್ತ್ರದಲ್ಲಿ ಹಿಜಾಬ್ ಧರಿಸಿ ರೀಲ್ಸ್ – ವಿವಾದ

ಕೊಡಗು: (ನ್ಯೂಸ್ ಮಲ್ನಾಡ್ ವರದಿ) ವೈದ್ಯಕೀಯ ಕಾಲೇಜಿನ ಹಿಂದು ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಸಮವಸ್ತ್ರದಲ್ಲಿ ಹಿಜಾಬ್ ಧರಿಸಿ ಆಸ್ಪತ್ರೆಯ ಆವರಣದಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾಳೆ.

ಚೆಟ್ಟಳ್ಳಿ ಮೂಲದ ಹಿಂದೂ ಯುವತಿಯೊಬ್ಬಳು ಮಾಡಿದ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ಉಂಟಾಗಿದೆ. ಸಮವಸ್ತ್ರದಲ್ಲಿದ್ದ ಯುವತಿ ಆಸ್ಪತ್ರೆಯೊಳಗೆ ಮಾಡಿದ ಈ ಕೃತ್ಯದ ಬಗ್ಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತದ ಬಗ್ಗೆ ತೀವ್ರ ಆಕ್ಷೇಪವನ್ನು ಹಿಂದೂ ಸಂಘಟನೆಗಳು ವ್ಯಕ್ತಪಡಿಸಿವೆ.

ತರಗತಿ ಒಳಗೆ ಇಂತಹ ಘಟನೆ ನಡೆದಿದ್ದು ಆ ನಂತರದಲ್ಲಿ ನಮ್ಮ ಗಮನಕ್ಕೆ ಬಂದಿದೆ, ಈ ಬಗ್ಗೆ ಈ ಹಿಂದೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗಿತ್ತು, ಈಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯ ಆಗುವಂತೆ ಸುತ್ತೋಲೆ ಹೊರಡಿಸಲಾಗಿದ್ದು, ಕಾಲೇಜು ಕ್ಯಾಂಪಸ್ ಒಳಗೆ ಯಾವುದೇ ವಿದ್ಯಾರ್ಥಿಗಳು ಧರ್ಮಾಧಾರಿತವಾಗಿ ಪ್ರಚೋದನೆ ಆಗುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು– ಲೋಕೇಶ್, ಮುಖ್ಯಸ್ಥರು


ನ್ನೂ ಓದಿ: ಜಿಲ್ಲೆಯ ಅಂಗನವಾಡಿಯಲ್ಲಿ 153 ಹುದ್ದೆಗೆ ಅರ್ಜಿ ಆಹ್ವಾನ; SSLC, PUC ವಿದ್ಯಾರ್ಹತೆ


ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯ ಮುಖ್ಯಸ್ಥ ಲೋಕೇಶ್ ತರಗತಿ ಒಳಗೆ ಇಂತಹ ಘಟನೆ ನಡೆದಿದ್ದು ಆ ನಂತರದಲ್ಲಿ ನಮ್ಮ ಗಮನಕ್ಕೆ ಬಂದಿದೆ, ಈ ಬಗ್ಗೆ ಈ ಹಿಂದೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗಿತ್ತು, ಈಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯ ಆಗುವಂತೆ ಸುತ್ತೋಲೆ ಹೊರಡಿಸಲಾಗಿದ್ದು, ಕಾಲೇಜು ಕ್ಯಾಂಪಸ್ ಒಳಗೆ ಯಾವುದೇ ವಿದ್ಯಾರ್ಥಿಗಳು ಧರ್ಮಾಧಾರಿತವಾಗಿ ಪ್ರಚೋದನೆ ಆಗುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


ನ್ನೂ ಓದಿ: 10 ಗ್ರಾಂ ಬಂಗಾರದ ದರ 1,200 ರೂ. ಏರಿಕೆ!


ಕಾಲೇಜು ಮುಖ್ಯಸ್ಥರಿಗೆ ಈ ಬಗ್ಗೆ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ್ದು, ಕ್ರಮ ವಹಿಸಿ ನೋಟೀಸ್ ನೀಡಿರುತ್ತಾರೆ. ಮುಂದೆ ಇಂತಹ ಘಟನೆಗಳು ಮುಂದುವರೆದರೆ ಪ್ರತಿಭಟನೆ ಮಾಡಲಾಗುವುದು– ಸುನಿಲ್ ಮಾದಾಪುರ, ಹಿಂದು ಜಾಗರಣ ವೇದಿಕೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.